’ರೆನೋ ಡಸ್ಟರ್ ’ ಸದ್ಯದ ಮಟ್ಟಿಗೆ ದೇಶದಲ್ಲೇ ಅತ್ಯಂತ ಜನಪ್ರಿಯ ಎಸ್‌ಯುವಿ ಎಂಬ ಖ್ಯಾತಿ ಪಡೆದಿದೆ. ಅದರ ವಿನ್ಯಾಸ, ಅತಿವೇಗವಾಗಿ ಚಲಿಸುವ ಸಾಮರ್ಥ್ಯಗಳೆಲ್ಲವೂ ಕಾರು ಚಾಲಕರ ಅಚ್ಚುಮೆಚ್ಚಿನದಾಗಿದೆ.
ಅಕ್ಟೋಬರ್‌ನಲ್ಲಿ ಹಳೆಯ ಡಸ್ಟರ್ ಕಾರನ್ನು ಕಂಪನಿಗೆ ನೀಡಿ, ಹೊಸ ಕಾರು ಖರೀದಿ ಮೇಲೆ 50 ಸಾವಿರ ರೂ. ನಗದು ಹಾಗೂ 50 ಸಾವಿರ ರೂ. ರಿಯಾಯಿತಿ ಕೊಡುಗೆಯನ್ನು ಕಂಪನಿ ನೀಡುತ್ತಿದೆ. ಇದಲ್ಲದೆಯೇ 30 ಸಾವಿರ ರೂ. ಕಾರ್ಪೊರೇಟ್ ಡಿಸ್ಕೌಂಟ್ ಕೂಡ ನೀಡಲಾಗುತ್ತಿದೆ.
ಇನ್ನು ಕೇಂದ್ರ ಸರ್ಕಾರದ ಹೊಸ ಸ್ಕ್ರ್ಯಾಪಿಂಗ್ ನೀತಿಗೆ ಪೂರಕವಾಗಿ ರೆನೋ ಕಂಪನಿಯ ರಿಲೂವ್ ಯೋಜನೆ ಅಡಿಯಲ್ಲಿ ಹಳೆಯ ಕಾರೊಂದನ್ನು ಗುಜರಿಗೆ ಕೊಟ್ಟರೆ 10 ಸಾವಿರ ರೂ. ಎಕ್ಸ್‌ಚೇಂಜ್ ಉಡುಗೊರೆಯು ಹೊಸ ಕಾರಿಗೆ ಸಿಗಲಿದೆಯಂತೆ.
ಒಟ್ಟಾರೆಯಾಗಿ ಕನಿಷ್ಠ 1.10 ಲಕ್ಷ ರೂ. ಲಾಯಲ್ಟಿ ಉಡುಗೊರೆ ಮಾತ್ರ ಡಸ್ಟರ್‌ನ ಹೊಸ ಮಾಲೀಕರಿಗೆ ಖಚಿತವಾಗಿ ಸಿಗಲಿದೆ.
ಬೆಂಗಳೂರಿನಲ್ಲಿ ವಾಲಿದ ಮತ್ತೊಂದು ಬಹುಮಹಡಿ ಕಟ್ಟಡ; ಬೀಳುವ ಹಂತ ತಲುಪಿದ ಪೊಲೀಸ್ ವಸತಿ ಸಂಕಿರ್ಣ
1.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಇಂಜಿನ್ ಹೊಂದಿರುವ ಡಸ್ಟರ್ ಎಸ್‌ಯುವಿ ಗರಿಷ್ಠ 142 ನ್ಯಾನೊ ಮೀಟರ್ ಟಾರ್ಕ್ ಉತ್ಪಾದಿಸಬಲ್ಲದು. ಐದು ಮತ್ತು ಆರು ಗೇರುಗಳ ಸೌಲಭ್ಯವನ್ನು ಕಂಪನಿ ನೀಡುತ್ತದೆ. ಇದಲ್ಲದೆಯೇ ಇಂಟೀರಿಯರ್‌ಗಳ ವಿಚಾರದಲ್ಲಿ ಎಲ್‌ಇಡಿ ಹೆಡ್ ಮತ್ತು ಟೈಲ್ ಲ್ಯಾಂಪ್‌ಗಳು, 17 ಇಂಚಿನ ಅಲಾಯ್ ವೀಲ್‌ಗಳು, ಆಂಡ್ರಾಯ್ಡ್ ಇನ್ಫೋಟೇನ್‌ಮೆಂಟ್ ಸಿಸ್ಟಂ, 7 ಇಂಚಿನ ಟಚ್ ಸ್ಕ್ರೀನ್ ಕೂಡ ಮಾಲೀಕರಿಗೆ ಸಿಗಲಿದೆ.
ದಿಲ್ಲಿಯ ಷೋರೂಮ್‌ನಲ್ಲಿ ಡಸ್ಟರ್ ಎಸ್‌ಯುವಿ ಬೆಲೆಯು 9.85 ಲಕ್ಷ ರೂ.ನಿಂದ ಶುರುವಾಗುತ್ತದೆ. ವಿವಿಧ ಸೌಲಭ್ಯಗಳನ್ನು ಒಳಗೊಂಡ ಗರಿಷ್ಠ ಮಟ್ಟದ ಆರ್‌ಎಕ್ಸ್‌ಝಡ್ 1.3 ಲೀಟರ್ ಟರ್ಬೊ ಸಿವಿಟಿ ಟಾಪ್ ಮಾಡೆಲ್ 14.25 ಲಕ್ಷ ರೂ.ಗೆ ಖರೀದಿಗೆ ಲಭ್ಯವಿದೆ.