ವಿವಾದಿತ ‘ಜ್ಞಾನವಾಪಿ ಮಸೀದಿ’ ಗೆ ‘ಜ್ಞಾನವಾಪಿ ಮಂದಿರ’ ಎಂದು ಮರುನಾಮಕರಣ ಮಾಡಲಾಗಿದ್ದು, ಅಲ್ಲಿದ್ದ ಹಳೆಯ ಬೋರ್ಡ್ ನ್ನು ತೆರವುಗೊಳಿಸಲಾಗಿದೆ.
ಜ್ಞಾನವಾಪಿ ಮಸೀದಿಯಲ್ಲ, ಮಂದಿರ ಎಂದು ಅಲ್ಲಿ ಬೋರ್ಡ್ ಹಾಕಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿನ್ನೆಯಿಂದ ಜ್ಞಾನವ್ಯಾಪಿಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲಾಗಿದೆ.
31 ವರ್ಷಗಳ ನಂತರ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪೂಜೆ ನಡೆಯುತ್ತಿದೆ. ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರ (ಜನವರಿ 31) ಆವರಣದಲ್ಲಿರುವ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜಿಸುವ ಹಕ್ಕನ್ನು ನೀಡುವಂತೆ ಆದೇಶಿಸಿದೆ. ಈ ಮೂಲಕ ಜ್ಞಾನವಾಪಿಯ ವ್ಯಾಸ್ ಜಿ ಅವರ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜಿಸುವ ಹಕ್ಕನ್ನು ಪಡೆದಿದ್ದಾರೆ.
ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ನಿಂದ ನಾಮನಿರ್ದೇಶನಗೊಂಡ ಅರ್ಚಕರು ಪೂಜೆ ನಡೆಸಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತು. ಜನವರಿ 17 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ರಿಸೀವರ್ ಆಗಿ ನೇಮಿಸಿ, ನೆಲಮಾಳಿಗೆಯನ್ನು ಸುರಕ್ಷಿತವಾಗಿಡಲು ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಂತೆ ನಿರ್ದೇಶಿಸಿತು.