ಸುಪ್ರಿಂ ಕೋರ್ಟ್ ಅಧಿಕೃತ ಇಮೇಲ್ನಲ್ಲಿ ಪ್ರಧಾನಿ ಮೋದಿಯವರ ಫೋಟೋ ಹಾಗೂ ʼಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ ಅಡಿಬರಹಗಳನ್ನು ಅಳಿಸಿಹಾಕುವಂತೆ ಸರ್ವೋಚ್ಛ ನ್ಯಾಯಾಲಯ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸೂಚನೆ ನೀಡಿದೆ.
ಪ್ರಧಾನಿ ಮೋದಿಯವರ ಫೋಟೋ ಇರುವ ಜಾಗದಲ್ಲಿ ಸುಪ್ರೀಂಕೋರ್ಟ್ನ ಫೋಟೋ ಅಳವಡಿಸುವಂತೆಯೂ ಸೂಚನೆ ನೀಡಲಾಗಿದೆ.
ಅನೇಕ ವಕೀಲರು ನೀಡಿದ ದೂರನ್ನು ಆಧರಿಸಿ ಸುಪ್ರೀಂ ಕೋರ್ಟ್ ರಿಜಿಸ್ಟರ್ ನಿನ್ನೆ ಎನ್ಐಸಿಗೆ ಪತ್ರವನ್ನು ಬರೆದಿದ್ದಾರೆ. ಇಮೇಲ್ನಲ್ಲಿ ʼಆಜಾದಿ ಕಾ ಮಹೋತ್ಸವ್ʼ ಘೋಷ ವಾಕ್ಯ ಹಾಗೂ ಇದರೊಂದಿಗಿರುವ ಪ್ರಧಾನಿ ಮೋದಿ ಫೋಟೋವನ್ನು ಅಳಿಸಿ ಹಾಕಿ ಸುಪ್ರೀಂ ಕೋರ್ಟ್ನದ್ದೇ ಫೋಟೋ ಹಾಕುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಧಾನಿ ಮೋದಿ ಫೋಟೋ ವಿವಾದದ ಕಿಡಿ ಹೊತ್ತಿಸಿರೋದು ಇದೇ ಮೊದಲೇನಲ್ಲ. ಕೋವಿಡ್ ಲಸಿಕೆ ಪ್ರಮಾಣ ಪತ್ರಗಳಲ್ಲಿ ಮೋದಿಯ ಫೋಟೋ ಕೂಡ ಅನೇಕರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೆ ಕೇಂದ್ರ ಸರ್ಕಾರ ಮಾತ್ರ ವಿರೋಧಗಳ ನಡುವೆಯೂ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.