ಮುಂಬೈ: ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಆಗ್ರಹಿಸಿದ್ದಾರೆ.
ನಾನು ಮಸೀದಿಗಳಲ್ಲಿನ ಪ್ರಾರ್ಥನೆಯನ್ನು ವಿರೋಧಿಸಲ್ಲ ಅಥವಾ ಯಾವುದೇ ಧರ್ಮದ ವಿರೋಧಿಯೂ ಅಲ್ಲ ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತಿದೆ. ಅನಗತ್ಯವಾಗಿ ಅಷ್ಟು ಜೋರಾಗಿ ಪ್ರಾರ್ಥನೆ ಮಾಡುವುದು ಯಾಕೆ ? ಇದರಿಂದ ಸಮಸ್ಯೆಯಾಗುತ್ತಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ತಕ್ಷಣ ರಾಜ್ಯ ಸರ್ಕಾರ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆಸಬೇಕು. ಇಲ್ಲವಾದಲ್ಲಿ ನಾವು ಮಸೀದಿ ಹೊರಗಡೆ ಧ್ವನಿವರ್ಧಕ ಅಳವಡಿಸಿ ಅಲ್ಲಿ ಹನುಮಾನ್ ಚಾಲೀಸ್ ಶ್ಲೋಕ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರೀತಿ ವಿಚಾರಕ್ಕೆ ನಡೆದಿದೆ ನಡೆಯಬಾರದ ಘಟನೆ: ಪ್ರಿಯಕರನ ಸೋದರನ ಹತ್ಯೆ
ಅಲ್ಲದೇ ಕೆಲ ಮದರಸಾಗಳಲ್ಲಿ ಪಾಕಿಸ್ತಾನಿ ಮೂಲದವರಿದ್ದಾರೆ. ಒಂದಷ್ಟು ಶಾಸಕರು ಮತ ಬ್ಯಾಂಕ್ ಗಾಗಿ ಸೆಮಿನರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರಿಗೆ ಗೊತ್ತಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೇಂದ್ರ ಸರ್ಕಾರ ಇಂತಹ ಸೆಮಿನರಿಗಳ ಮೇಲೆ ದಾಳಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.