ಗ್ಯಾಂಗ್ರೀನ್ ಎಂದರೆ ದೇಹದ ಒಂದು ಅಂಗಕ್ಕೆ ಸರಿಯಾಗಿ ರಕ್ತ ಸಂಚಾರ ಆಗದಿರುವುದು. ಆಕ್ಸಿಜನ್, ನ್ಯೂಟ್ರಿಶನ್ಸ್ ಕೊರತೆಯಾದಾಗ ಪೋಷಕಾಂಶಗಳ ಕೊರತೆ ಆಗುತ್ತದೆ. ಆ ಭಾಗದ ಅಂಗ ಕೊಳೆಯುತ್ತ ಹೋಗುತ್ತದೆ. ಇದನ್ನೇ ಗ್ಯಾಂಗ್ರೀನ್ ಎನ್ನುತ್ತಾರೆ. ಇದು ವೇರಿಕೊಸ್ ನಿಂದ ಆಗಿರಬಹುದು ಅಥವಾ ಇನ್ನ್ಯಾವುದೋ ಚರ್ಮ ರೋಗದಿಂದ ಆಗಿರಬಹುದು.
ಆಯುರ್ವೇದದಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಇದೆ. ಇದಕ್ಕೆ ಜಲೋಕಾವಚರಣ ಎಂಬ ಚಿಕಿತ್ಸೆ ಇದೆ. ಪಂಚಕರ್ಮದ ಒಂದು ಉಪಕರ್ಮ ವಿಧಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಹಾಗಾಗಿ ಗ್ಯಾಂಗ್ರೀನ್ ಅನ್ನು ವಾಸಿ ಮಾಡಲಿಕ್ಕೆ ಆಯುರ್ವೇದದಲ್ಲಿ ಸಾಧ್ಯ. ಮನೆಮದ್ದುಗಳ ಪ್ರಯೋಗ ಬೇಡ. ಗ್ಯಾಂಗ್ರೀನ್ ನಿಂದ ಬಳಲುವ ರೋಗಿಗಳು ಯಾವುದೇ ಕಾರಣಕ್ಕೆ ಮದ್ಯಪಾನ ಮತ್ತು ತಂಬಾಕನ್ನು ಉಪಯೋಗಿಸಬೇಡಿ.
ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಇದಕ್ಕಾಗಿ ಭಯ ಪಡುವ ಅವಶ್ಯಕತೆ ಇಲ್ಲ. ನೀವು ನಿಮಗೆ ಹತ್ತಿರವಿರುವ ಆಯುರ್ವೇದ ತಜ್ಞರನ್ನು ಕೂಡಲೇ ಭೇಟಿ ಮಾಡಿ ನಿಮ್ಮ ಸಮಸ್ಯೆಗೆ ನೀವು ಚಿಕಿತ್ಸೆಯನ್ನು ಪಡೆಯಿರಿ.