ಕೆನಡಾ ಗಾಯಕ ವೀಕಂಡ್‌ರ ಬ್ಲೈಂಡಿಂಗ್ ಲೈಟ್ಸ್‌ನ ಹಾಡನ್ನು ಹಾಡುವ ತನ್ನ ವಿಡಿಯೋ ಶೇರ್ ಮಾಡಿಕೊಂಡು ಫೇಮಸ್ಸಾಗಿದ್ದ ದರ್ಶನ್ ಮಗ್ದುಂ ಹೆಸರಿನ ಯುವಕ ಇನ್‌ಸ್ಟಾಗ್ರಾಂನಲ್ಲಿ ತನ್ನ ಥರಾವರಿ ವಿಡಿಯೋಗಳಿಂದ ಖ್ಯಾತಿ ಪಡೆದಿದ್ದಾನೆ.
ಇದೀಗ ಮುಂಬಯಿ ಮೂಲದ ಕಂಟೆಂಟ್ ಸೃಷ್ಟಿಕರ್ತ ಮಿಥಿಲೇಶ್ ಪಠಾನ್ಕರ್ ದರ್ಶನ್‌ನೊಂದಿಗೆ ಕೊಲಾಬರೇಷನ್ ಮಾಡಲು ಮುಂದಾಗಿದ್ದಾರೆ.
ಕೇವಲ ಬ್ಲೈಂಡಿಗ್ ಲೈಟ್ಸ್ ಮಾತ್ರವಲ್ಲ, ಆಸ್ ಇಟ್ ವಾಸ್ (ಹ್ಯಾರಿ ಸ್ಟೈಲ್ಸ್) ಮ್ಯಾಶಪ್‌ನಲ್ಲೂ ಸಹ ಈತ ನಟಿಸಿದ್ದಾನೆ. ಈ ಹೊಸ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಶೇರ್ ಮಾಡಲಾಗಿದೆ.