alex Certify ʼಲೂನಾʼ ಸೇರಿದಂತೆ ಹಳೆ ವಾಹನಗಳ ವೈಭೋಗವನ್ನು ಮತ್ತೆ ನೆನಪಿಸಿಕೊಂಡ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲೂನಾʼ ಸೇರಿದಂತೆ ಹಳೆ ವಾಹನಗಳ ವೈಭೋಗವನ್ನು ಮತ್ತೆ ನೆನಪಿಸಿಕೊಂಡ ನೆಟ್ಟಿಗರು

ಹೆಚ್ಚಿನ ವೇಗದ ಮತ್ತು ಸ್ವಯಂಚಾಲಿತ ದ್ವಿಚಕ್ರ ವಾಹನಗಳು ಜಗತ್ತನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು, ಬಜಾಜ್, ಯಮಹಾ ಮತ್ತು ಲೂನಾ ಅತ್ಯುತ್ತಮ ಬ್ರ್ಯಾಂಡ್‌ಗಳಾಗಿದ್ದವು, ಭಾರತೀಯರಿಗೆ 1980 ಮತ್ತು 1990 ರ ದಶಕಗಳಲ್ಲಿ ಇವು ಬಹಳ ಅಚ್ಚುಮೆಚ್ಚಾಗಿದ್ದವು.

ಬಜಾಜ್ ಚೇತಕ್, ಯಮಹಾ RX100 ನಿಂದ ಹಾರ್ಲೆ ಡೇವಿಡ್‌ಸನ್ ಮತ್ತು ಬುಲೆಟ್‌ವರೆಗೆ, ದ್ವಿಚಕ್ರ ವಾಹನ ಉದ್ಯಮವು ತೀವ್ರವಾದ ವಿಕಾಸಕ್ಕೆ ಸಾಕ್ಷಿಯಾಗಿದೆ. ಆಧುನಿಕ ವಿಶೇಷಣಗಳು ಗ್ರಾಹಕರನ್ನು ಪ್ರಭಾವಿತಗೊಳಿಸಿದ್ದರೂ, ಹಿಂದಿನ ಬೈಕ್​ಗಳನ್ನು ಬಳಸುತ್ತಿದ್ದವರಿಗೆ ಈ ಹೊಸ ಬೈಕ್​ಗಳು ಅಷ್ಟೊಂದು ಹಿಡಿಸುತ್ತಿಲ್ಲ. ಅವರೇನಿದ್ದರೂ ಹಿಂದಿನ ದಿನಗಳಲ್ಲಿ ಭಾರತದಲ್ಲಿ ಸೂಪರ್ ಬೈಕ್‌ಗಳಿದ್ದವು ಎಂದು ಕೊಂಡಾಡುವುದೇ ಇದಕ್ಕೆ ಸಾಕ್ಷಿಯಾಗಿದೆ.

ಬುಲೆಟ್, ರಾಜ್‌ದೂತ್, ಯೆಜ್ಡಿ ಮತ್ತು ಯಮಹಾ ಆರ್‌ಎಕ್ಸ್ 100 ನಂಥ ಬೈಕ್​ಗಳು ಮಾರುಕಟ್ಟೆಗೆ ಬಂದ ತಕ್ಷಣ ಅಷ್ಟೇ ವೇಗದಲ್ಲಿ ಅದನ್ನು ಖರೀದಿಸುವಷ್ಟು ಈಗಿನ ಬೈಕ್​ಗಳ ಮಟ್ಟ ಇಲ್ಲ ಎನ್ನುವುದು ಹಲವರು ಅಭಿಮತ. ಲೂನಾದಿಂದ ಪ್ರಾರಂಭವಾದ ಪಟ್ಟಿಯು ಬಜಾಜ್ ಚೇತಕ್, ಕೈನೆಟಿಕ್ ಹೋಂಡಾ, ರಾಜ್‌ದೂತ್ 350, ಯೆಜ್ಡಿ ಮತ್ತು ಹೀರೋ ಹೋಂಡಾ ಸಿಡಿ 100 ಸೇರಿದಂತೆ ಇತರ ಬ್ರ್ಯಾಂಡ್‌ಗಳನ್ನು ಹೈಲೈಟ್ ಮಾಡಿದ್ದು, ಇದಕ್ಕಿಂತ ಉತ್ತಮ ಯಾವುದೂ ಇಲ್ಲ ಎಂದು ಹಲವರು ನಂಬಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...