ಕೈತುಂಬ ಸಂಬಳ ಬರುವ ಒಳ್ಳೆ ನೌಕರಿ ಬೇಕೆಂಬುದು ಎಲ್ಲರ ಕನಸು. ಸರ್ಕಾರಿ ನೌಕರಿಗಾಗಿ ಅನೇಕರು ಕಷ್ಟಪಡ್ತಾರೆ. ಆದ್ರೆ ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಈ ಸಮಯದಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಅಷ್ಟು ಸುಲಭವಲ್ಲ. ಸರ್ಕಾರಿ ನೌಕರಿ ಸಿಗ್ತಿಲ್ಲವೆಂದು ನಿರಾಶೆಗೊಳ್ಳುವ ಅಗತ್ಯವಿಲ್ಲ. ಶೀಘ್ರದಲ್ಲೇ ಸರ್ಕಾರಿ ಉದ್ಯೋಗ ಬೇಕೆನ್ನುವವರು ಸುಲಭ ಮಾರ್ಗ ಅನುಸರಿಸಬೇಕು.
ಸರ್ಕಾರಿ ಕೆಲಸ ಬೇಕೆನ್ನುವವರು ಪ್ರತಿ ದಿನ ಶಿವನ ಪೂಜೆ ಮಾಡಬೇಕು. ಎಲ್ಲ ಅಡೆತಡೆಗಳನ್ನು ಶಿವ ತಡೆಯುತ್ತಾನೆಂಬ ನಂಬಿಕೆಯಿದೆ. ಹಾಗಾಗಿ ಪ್ರತಿ ಸೋಮವಾರ ಶಿವಲಿಂಗಕ್ಕೆ ನೀರು ಅರ್ಪಿಸಬೇಕು. ಹಾಲು ಹಾಗೂ ಅಕ್ಕಿ ಅಭಿಷೇಕವನ್ನೂ ಮಾಡಬೇಕು.
ಚತುರ್ಥಿಯ ದಿನದಂದು ಗಣೇಶನ ಮೂರ್ತಿ ಅಥವಾ ಫೋಟೋಕ್ಕೆ ಪೂಜೆ ಸಲ್ಲಿಸಬೇಕು. ಸಂದರ್ಶನಕ್ಕೆ ಹೊರಟಿದ್ದರೆ ಮನೆ ಬಿಡುವ ಮೊದಲು ಹಾಲು ಹಾಗೂ ಬೆಲ್ಲ ತಿಂದು ಹೋಗಬೇಕು. ಇದ್ರಿಂದ ಯಶಸ್ಸು ಸಾಧ್ಯ.
ಪ್ರತಿ ಮಂಗಳವಾರ ಭಜರಂಗಬಲಿಗೆ ಸಿಂಧೂರವನ್ನು ಅರ್ಪಿಸಿ. ಗುಲಾಬಿ ಹೂವನ್ನು ಭಜರಂಗಬಲಿಗೆ ಅರ್ಪಿಸಿ. ಆಕಾಶದ ಮೇಲೆ ಹಾರುತ್ತಿರುವ ಹನುಮಂತನ ಫೋಟೋವನ್ನು ಪೂಜಿಸಿ. ನಿಯಮಿತವಾಗಿ ಹನುಮಾನ್ ಚಾಲಿಸನ್ನು ನಿಯಮಿತವಾಗಿ ಪಠಿಸಿ. ಜಾತಕದಲ್ಲಿ ಶನಿ ದೋಷವಿದ್ದಲ್ಲಿ ಕೆಲಸದಲ್ಲಿ ಅಡೆತಡೆಯುಂಟಾಗುತ್ತದೆ. ಪ್ರತಿ ಶನಿವಾರ ಶನಿದೇವರ ಆರಾಧನೆ ಮಾಡಿ. ಅಲ್ಲದೆ 108 ಬಾರಿ ಶಂ ಶನೈಶ್ಚರಾಯ ನಮಃ ಮಂತ್ರವನ್ನು ಜಪಿಸಿ.