ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಕೊರೋನಾ ಚಿಕಿತ್ಸೆ ಔಷಧ ಪಟ್ಟಿಯಿಂದ ರೆಮ್ ಡೆಸಿವಿರ್ ಔಷಧ ವನ್ನು ವಿಶ್ವ ಆರೋಗ್ಯ ಸಂಸ್ಥೆ ಕೈಬಿಟ್ಟಿದೆ.
ರೆಮ್ ಡೆಸಿವಿರ್ ಕೊರೋನಾ ವಿರುದ್ಧ ಪರಿಣಾಮಕಾರಿಯಲ್ಲ ಎಂದು ಆರೋಗ್ಯ ಸಂಸ್ಥೆ ಹೇಳಿದ್ದು, ಹೀಗಾಗಿ ಚಿಕಿತ್ಸೆ ಪಟ್ಟಿಯಿಂದ ರೆಮ್ ಡೆಸಿವಿರ್ ಔಷಧವನ್ನು ಕೈಬಿಟ್ಟಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ರೆಮ್ ಡೆಸಿವಿರ್ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಪುರಾವೆಗಳು ಇಲ್ಲದ ಕಾರಣ ಅದನ್ನು ಚಿಕಿತ್ಸೆಯಿಂದ ಬಿಡಲಾಗುವುದು ಎಂದು ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಡಾ.ಡಿ.ಎಸ್. ರಾಣಾ ಹೇಳಿದ್ದರು. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ರೆಮ್ ಡೆಸಿವಿರ್ ಪರಿಣಾಮಕಾರಿಯಾಗಿದೆ ಎನ್ನುವಂತಹ ಯಾವುದೇ ಪುರಾವೆ ಇಲ್ಲದ ಕಾರಣ ಅಂತಹ ಔಷಧ ನಿಲ್ಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದರು.