alex Certify ನಾಪತ್ತೆಯಾಗಿದ್ದ ಪರ್ವತಾರೋಹಿ ಮೃತದೇಹ ಬರೋಬ್ಬರಿ 50 ವರ್ಷಗಳ ಬಳಿಕ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಪತ್ತೆಯಾಗಿದ್ದ ಪರ್ವತಾರೋಹಿ ಮೃತದೇಹ ಬರೋಬ್ಬರಿ 50 ವರ್ಷಗಳ ಬಳಿಕ ಪತ್ತೆ….!

ಸ್ವಿಜರ್ಲ್ಯಾಂಡ್ ನ penine ಆಲ್ಸ್ಪ್ ಪರ್ವತ ಏರಲು ತೆರಳಿ ನಾಪತ್ತೆಯಾಗಿದ್ದ ಬ್ರಿಟಿಷ್ ಪರ್ವತಾರೋಹಿ ಒಬ್ಬರ ಮೃತದೇಹ ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಪತ್ತೆಯಾಗಿದೆ. ಈತ 1974ರ ಡಿಸೆಂಬರ್ 31 ರಂದು ನಾಪತ್ತೆಯಾಗಿದ್ದ ಎಂದು ಮೂಲಗಳು ಹೇಳಿವೆ.

ಪರ್ವತಾರೋಹಣ ವೇಳೆ 32 ವರ್ಷ ವಯಸ್ಸಿನವರಾಗಿದ್ದ ಈ ವ್ಯಕ್ತಿ ಬಳಿಕ ನಾಪತ್ತೆಯಾಗಿದ್ದರು. ಈತನ ಮೃತ ದೇಹ 2022ರ ಸೆಪ್ಟೆಂಬರ್ 5 ರಂದು ಪತ್ತೆಯಾಗಿದೆ ಎನ್ನಲಾಗಿದೆ. ಪರ್ವತಾರೋಹಿಯ ವಯಸ್ಸು (ಆಗಿನ ಸಂದರ್ಭದಲ್ಲಿ) ಹಾಗೂ ರಾಷ್ಟ್ರೀಯತೆಯನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿದ್ದಾರೆ.

1925 ರಿಂದ ಈಚೆಗೆ ಈ ಪರ್ವತದಲ್ಲಿ 300ಕ್ಕೂ ಅಧಿಕ ಮಂದಿ ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಇದೀಗ ಹಿಮಗಲ್ಲು ಕರಗುತ್ತಿರುವ ಕಾರಣ ಮೃತದೇಹಗಳು ಕಾಣಿಸುತ್ತಿವೆ.

ಈ ಹಿಂದೆ ಅಂದರೆ 1942ರಲ್ಲಿ ಪರ್ವತಾರೋಹಣಕ್ಕೆ ತೆರಳಿದ್ದ ಜೋಡಿಯೊಂದು ನಾಪತ್ತೆಯಾಗಿದ್ದು ಬಳಿಕ ಇವರುಗಳ ಮೃತದೇಹ 2017ರಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೊಬ್ಬ ಪರ್ವತಾರೋಹಿಯ ದೇಹ 50 ವರ್ಷಗಳ ಬಳಿಕ ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...