ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬಳಿ ಮಸೀದಿಗೆ ನುಗ್ಗಿ ಧರ್ಮಗುರು ಮೇಲೆ ಹಲ್ಲೆ ನಡೆಸಲಾಗಿದೆ.
ಮೋಹಿದೀನ್ ಜುಮಾ ಮಸೀದಿಯ ಧರ್ಮಗುರು ಶಾಮೀರ್ ಮುಸ್ಲಿಯಾರ್(37) ಅವರ ಮೇಲೆ ಸುಮಾರು 12 ಜನರ ತಂಡ ದಾಳಿ ಮಾಡಿ ಹಲ್ಲೆ ನಡೆಸಿದೆ. ಗಾಯಗೊಂಡ ಧರ್ಮಗುರು ಶಾಮೀರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರಾದ ಬದ್ರುದ್ದೀನ್, ಶಂಸುದ್ದೀನ್, ನೌಫಲ್, ಮುನಿರ್ ಸೇರಿದಂತೆ ಇತರರು ಮಸೀದಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಧರ್ಮಗುರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಜರುಗಿಸಿದ್ದಾರೆ.