ಬೆಂಗಳೂರು: ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಹೈಕೋರ್ಟ್ ಗರಂ ಆಗಿದೆ.
382 ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಬಿಬಿಎಂಪಿ ವರದಿ ನೀಡಿದ್ದು, 105 ಕಟ್ಟಡ ಸ್ಥಳಾಂತರಿಸಬೇಕೆಂದು ಪಾಲಿಕೆಯೇ ತಿಳಿಸಿದೆ. ಆದರೆ, ಇದುವರೆಗೆ 5 ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರಿಸುವುದಾಗಿ ಹೇಳಿದ್ದು, ಒಂದೇ ಒಂದು ಧಾರ್ಮಿಕ ಕೇಂದ್ರ ಸ್ಥಳಾಂತರಿಸಿಲ್ಲ. 2009 ರಲ್ಲಿಯೇ ಸುಪ್ರೀಂಕೋರ್ಟ್ ಈ ಬಗ್ಗೆ ನಿರ್ದೇಶನ ನೀಡಿದೆ. ಆದರೆ, ಪಾಲಿಕೆ ಕ್ರಮ ಕೈಗೊಳ್ಳದಿರುವುದು ಆಘಾತಕಾರಿ ವಿಷಯವಾಗಿದೆ. ಕಾಲಮಿತಿಯೊಳಗೆ ಅನಧಿಕೃತ ಕಟ್ಟಡ ತೆರವುಗೊಳಿಸಬೇಕೆಂದು ತಿಳಿಸಿದ್ದು, ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ತಾಕೀತು ಮಾಡಿದೆ.