ಮೊಬೈಲ್ ಬಳಕೆದಾರರ ಜೇಬಿಗೆ ಈಗಾಗಲೇ ಕತ್ತರಿ ಬಿದ್ದಿದೆ. ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಯಾವ ಕಂಪನಿಯ ಯಾವ ಯೋಜನೆ ಅಗ್ಗದಲ್ಲಿದೆ ಎಂಬ ಗೊಂದಲ ಮೊಬೈಲ್ ಬಳಕೆದಾರರಿಗೆ ಕಾಡ್ತಿದೆ. 300 ರೂಪಾಯಿಗಿಂತ ಕಡಿಮೆ ಬೆಲೆಯ ಜಿಯೋ, ವಿಐ ಪ್ಲಾನ್ ವಿವರ ಇಲ್ಲಿದೆ.
ಜಿಯೋ 239 ರೂಪಾಯಿ ಯೋಜನೆ ಹೊಂದಿದ್ದರೆ ವಿಐ 299 ರೂಪಾಯಿ ಯೋಜನೆಯನ್ನು ಗ್ರಾಹಕರಿಗೆ ನೀಡ್ತಿದೆ. ವಿಐಗೆ ಹೋಲಿಕೆ ಮಾಡಿದ್ರೆ ಜಿಯೋ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ.
ವೊಡಾಫೋನ್ ಐಡಿಯಾದ 299 ರೂಪಾಯಿ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 1.5ಜಿಬಿ ಡೇಟಾ ಲಭ್ಯವಿದೆ. ಅನಿಯಮಿತ ಧ್ವನಿ ಕರೆ ಮತ್ತು 100 ಎಸ್ಎಂಎಸ್ ಲಭ್ಯವಿದೆ. ಇದಲ್ಲದೆ ಇನ್ನು ಕೆಲ ಚಂದಾದಾರಿಕೆಯನ್ನು ಈ ಪ್ಲಾನ್ ನಲ್ಲಿ ಗ್ರಾಹಕರು ಪಡೆಯಬಹುದಾಗಿದೆ.
ಜಿಯೋದ 239 ರೂಪಾಯಿ ಯೋಜನೆಯಲ್ಲಿ ಬಳಕೆದಾರರಿಗೆ 28 ದಿನಗಳ ಮಾನ್ಯತೆ ಸಿಗಲಿದೆ. ಬಳಕೆದಾರರು ದಿನಕ್ಕೆ 1.5ಜಿಬಿ ಡೇಟಾ ಪಡೆಯಲಿದ್ದಾರೆ. ಒಟ್ಟು 42ಜಿಬಿ ಡೇಟಾ ಈ ಪ್ಲಾನ್ ನಲ್ಲಿ ಸಿಗಲಿದೆ. ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಲಭ್ಯವಿದೆ.
ಇನ್ನು ಏರ್ಟೆಲ್ 300 ರೂಪಾಯಿಗಿಂತ ಕಡಿಮೆ ಬೆಲೆಗೆ 299 ರೂಪಾಯಿ ಯೋಜನೆ ನೀಡ್ತಿದೆ. ಈ ಯೋಜನೆ 28 ದಿನಗಳ ಮಾನ್ಯತೆ ಹೊಂದಿದೆ. ಪ್ರತಿದಿನ 1.5ಜಿಬಿ ಡೇಟಾ ಮತ್ತು 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಅಮೆಜಾನ್ ಪ್ರೈಂ ವಿಡಿಯೋ ಸೇರಿದಂತೆ ಹಲ್ಲೋ ಟ್ಯೂನ್ ಗೆ ಚಂದಾದಾರಿಕೆ ಲಭ್ಯವಿದೆ.