ಅಗ್ಗದ ಬೆಲೆಗೆ ಹೆಚ್ಚಿನ ಡೇಟಾ ನೀಡೋದ್ರಲ್ಲಿ ರಿಲಯನ್ಸ್ ಜಿಯೋ ಮುಂದಿದೆ. ಕಡಿಮೆ ಬೆಲೆಗೆ ಕಂಪನಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಂತಹ ಚಂದಾದಾರಿಕೆಯನ್ನೂ ನೀಡುತ್ತದೆ. ಜಿಯೋದ 549 ರೂಪಾಯಿ ಯೋಜನೆಯಲ್ಲೂ ಸಾಕಷ್ಟು ಆಫರ್ ನೀಡಲಾಗ್ತಿದೆ.
ಜಿಯೋದ 549 ರೂಪಾಯಿ ಯೋಜನೆ 56 ದಿನಗಳ ಸಿಂಧುತ್ವ ಹೊಂದಿದೆ. ಈ ಯೋಜನೆಯಲ್ಲಿ ದಿನಕ್ಕೆ 1.5 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಾಗುತ್ತದೆ. ದಿನದ ಡೇಟಾ ಖಾಲಿಯಾದ್ಮೇಲೆ ಇಂಟರ್ನೆಟ್ ವೇಗ 64 ಕೆಬಿಪಿಎಸ್ ಆಗಲಿದೆ.
ಈ ಪ್ಲಾನ್ ನಲ್ಲಿ ಕಂಪನಿ 1 ವರ್ಷಕ್ಕೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ ನೀಡುತ್ತದೆ. ಇದಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಗೆ ಉಚಿತ ಅವಕಾಶ ನೀಡುತ್ತದೆ.
ಜಿಯೋದ ಇನ್ನೊಂದು ಯೋಜನೆ 500 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಜಿಯೋದ ಈ 444 ರೂಪಾಯಿ ಪ್ಲಾನ್ ನಲ್ಲಿ ಪ್ರತಿದಿನ 2ಜಿಬಿ ಇಂಟರ್ನೆಟ್ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ, ದಿನಕ್ಕೆ 100 ಎಸ್ಎಂಎಸ್ ಸಿಗಲಿದೆ. ಇದಲ್ಲದೆ ಜಿಯೋ ಚಂದಾದಾರಿಕೆ ಕೂಡ ಲಭ್ಯವಾಗಲಿದೆ.
ಜಿಯೋದ 151 ರೂಪಾಯಿ ಪ್ಲಾನ್ 30 ದಿನಗಳ ಮಾನ್ಯತೆ ಹೊಂದಿದೆ. ಇದಕ್ಕೆ ದಿನದ ಡೇಟಾ ಮಿತಿಯಿಲ್ಲ. 30 ದಿನಗಳ ಕಾಲ 30ಜಿಬಿ ಡೇಟಾ ಸಿಗಲಿದೆ. ಜಿಯೋದ ಇನ್ನೊಂದು ಯೋಜನೆ ಬೆಲೆ 251 ರೂಪಾಯಿ. ಈ ಯೋಜನೆಯಲ್ಲಿ 30 ದಿನಗಳ ಮಾನ್ಯತೆಯೊಂದಿಗೆ 50 ಜಿಬಿ ಡೇಟಾ ಸಿಗುತ್ತದೆ.
ಜಿಯೋದ 201 ರೂಪಾಯಿ ಪ್ಲಾನ್‌ನ ಮಾನ್ಯತೆಯು 30 ದಿನಗಳು. ಇದರಲ್ಲಿ ಬಳಕೆದಾರರು 40ಜಿಬಿ ಡೇಟಾ ಪಡೆಯಲಿದ್ದಾರೆ. ಈ ಯೋಜನೆಯಲ್ಲೂ ಯಾವುದೇ ಡೇಟಾ ಮಿತಿಯಿಲ್ಲ.ಯಾವಾಗ ಬೇಕಾದ್ರೂ ಈ ಡೇಟಾ ಬಳಸಬಹುದು.