
ಅಗ್ಗದ ಬೆಲೆಗೆ ಹೆಚ್ಚು ಡೇಟಾ ನೀಡುವ ಟೆಲಿಕಾಂ ಕಂಪನಿಗಳ ಪಟ್ಟಿಯಲ್ಲಿ ಜಿಯೋ ಕೂಡ ಸೇರಿದೆ. ಗ್ರಾಹಕರನ್ನು ಸೆಳೆಯಲು ಜಿಯೋ, ಹೊಸ ಹೊಸ ಆಫರ್ ಬಿಡುಗಡೆ ಮಾಡ್ತಿರುತ್ತದೆ. ಕೆಲ ದಿನಗಳ ಹಿಂದೆ ಜಿಯೋ ಪ್ರಿಪೇಯ್ಡ್ ಪ್ಲಾನ್ ಶುರು ಮಾಡಿದೆ. ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಸಿಗ್ತಿದೆ.
ರಿಲಾಯನ್ಸ್ ಜಿಯೋ ಈ ಕ್ಯಾಶ್ ಬ್ಯಾಕ್ ಆಫರ್ ಎಲ್ಲ ಪ್ರಿಪೇಯ್ಡ್ ಪ್ಲಾನ್ ಗೆ ಲಭ್ಯವಿಲ್ಲ. ಜಿಯೋ ಕ್ಯಾಶ್ ಬ್ಯಾಕ್ ಆಫರ್ 249, 555 ಹಾಗೂ 599 ರೂಪಾಯಿ ಪ್ಲಾನ್ ನಲ್ಲಿ ಮಾತ್ರ ಲಭ್ಯವಿದೆ. ಈ ಕ್ಯಾಶ್ ಬ್ಯಾಕ್ ಲಾಭ ಪಡೆಯಲು ಗ್ರಾಹಕರು ಕಂಪನಿ ವೆಬ್ಸೈಟ್ ಅಥವಾ ಮೈಜಿಯೋ ಅಪ್ಲಿಕೇಷನ್ ಮೂಲಕ ರಿಚಾರ್ಜ್ ಮಾಡಬೇಕು.
ಜಿಯೋ ಈ ಆಫರ್ ಗೆ ಜಿಯೋ ಮಾರ್ಟ್ ಮಹಾ ಕ್ಯಾಶ್ ಬ್ಯಾಕ್ ಎಂದು ಹೆಸರಿಟ್ಟಿದೆ.ಈ ಆಫರ್ ಅಡಿ ರಿಚಾರ್ಜ್ ಮಾಡಿದ್ರೆ ಗ್ರಾಹಕರಿಗೆ ಶೇಕಡಾ 20ರಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ. ಈ ಕ್ಯಾಶ್ ಬ್ಯಾಕ್ ನ್ನು ಜಿಯೋ ಮಾರ್ಟ್, ರಿಲಾಯನ್ಸ್ ಡಿಜಿಟಲ್, ಜಿಯೋ ರಿಚಾರ್ಜ್ ಹಾಗೂ ಬೇರೆ ಸೇವೆ ಪಡೆಯಲು ಬಳಸಬಹುದು.
249 ರೂಪಾಯಿ ರಿಚಾರ್ಜ್ ಮಾಡಿದ್ರೆ 50 ರೂಪಾಯಿವರೆಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ. 555 ರೂಪಾಯಿ ರಿಚಾರ್ಜ್ ಮಾಡಿಸಿದ್ರೆ 111 ರೂಪಾಯಿವರೆಗೆ ಕ್ಯಾಶ್ ಬ್ಯಾಕ್ ಸಿಗಲಿದೆ. 599 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 120 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.