ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕ್ ನೀಡಿದೆ. ತನ್ನ ಯೋಜನೆಗಳ ಬೆಲೆಯನ್ನು ಜಿಯೋ ಏರಿಕೆ ಮಾಡಿದೆ. ಇದೇ ವೇಳೆ ಕೆಲ ಯೋಜನೆಗಳಲ್ಲಿ ಬದಲಾವಣೆ ಮಾಡಿದೆ. ಜಿಯೋದ ಹೊಸ ಯೋಜನೆಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ರಿಲಾಯನ್ಸ್ ಜಿಯೋ ಶುರು ಮಾಡಿರುವ ಹೊಸ ಯೋಜನೆಯಲ್ಲಿ 209 ರೂಪಾಯಿ ಯೋಜನೆ ಕೂಡ ಒಂದು.
ರಿಲಯನ್ಸ್ ಜಿಯೋದ 209 ರೂಪಾಯಿ ಪ್ಲಾನ್‌ನ ಮಾನ್ಯತೆ 28 ದಿನಗಳು. ಬಳಕೆದಾರರಿಗೆ ಈ ಯೋಜನೆಯಲ್ಲಿ ಪ್ರತಿ ದಿನ 1 ಜಿಬಿ ಡೇಟಾ ಲಭ್ಯವಾಗಲಿದೆ. ಬಳಕೆದಾರರು ಒಟ್ಟೂ 28ಜಿಬಿ ಡೇಟಾವನ್ನು ಪಡೆಯುತ್ತಾರೆ. ಈ ಪ್ಲಾನ್ ನಲ್ಲಿ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆ ಮಾಡಬಹುದು. ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.
ಭಾರತದಲ್ಲಿ ಬುಕಿಂಗ್ ಗೆ ಚಾಲನೆ ಕೊಟ್ಟ ಟ್ರಂಫ್ ಟೈಗರ್ ಸ್ಪೋರ್ಟ್ 660
ಜಿಯೋದ 209 ರೂಪಾಯಿ ಪ್ಲಾನ್ ನಲ್ಲಿ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಿಗಲಿದೆ. ಇದಲ್ಲದೆ ಕಂಪನಿ 149 ರೂಪಾಯಿ ಮತ್ತು 179 ರೂಪಾಯಿ ಯೋಜನೆಗಳನ್ನು ಶುರು ಮಾಡಿದೆ. ರಿಲಯನ್ಸ್ ಜಿಯೋದ 179 ರೂಪಾಯಿ ಯೋಜನೆ 24 ದಿನಗಳ ಮಾನ್ಯತೆ ಹೊಂದಿದ್ದು, 1ಜಿಬಿ ಡೇಟಾ ಲಭ್ಯವಿದೆ. ಬಳಕೆದಾರರಿಗೆ 24 ದಿನಗಳಲ್ಲಿ 24 ಜಿಬಿ ಡೇಟಾ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಹಾಗೂ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.
ಇನ್ನು ಜಿಯೋದ 149 ರೂಪಾಯಿ ಪ್ಲಾನ್ 20 ದಿನಗಳ ಮಾನ್ಯತೆ ಹೊಂದಿದೆ. 1ಜಿಬಿ ಡೇಟಾ ಇದ್ರಲ್ಲಿ ಪ್ರತಿ ದಿನ ಸಿಗುತ್ತದೆ. ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆ ಹಾಗೂ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಿಗಲಿದೆ.