
ಹೊಸ ರೇಂಜ್‌ನ ಪ್ರೀಪೇಯ್ಡ್ ಪ್ಲಾನ್‌ಗಳನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿರುವ ರಿಲಯನ್ಸ್ ಜಿಯೋ, 499ರೂಪಾಯಿಂದ ಆರಂಭಗೊಳ್ಳುವ ಈ ಪ್ಲಾನ್‌ಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ನ ಎಲ್ಲಾ ಕಂಟೆಂಟ್‌ಗಳನ್ನೂ ವೀ ಕ್ಷಿಸಬಹುದಾದ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿದೆ.
ಈ ಮುನ್ನ 401ರೂಪಾಯಿಗೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಕೊಡುತ್ತಿದ್ದ ಜಿಯೋ ಇದೀಗ ಇದೇ ಪ್ಯಾಕೇಜ್‌ನ ಅನಿಯಮಿತ ಕಂಟೆಂಟ್‌ಗಳನ್ನು ಮಾಸಿಕ 499 ರೂಗಳಿಂದ ಕೊಡಲಿದೆ.
ಡಿಸ್ನಿ+ ಹಾಟ್‌ಸ್ಟಾರ್ ಭಾರತದ ಮಾರುಕಟ್ಟೆಯಲ್ಲಿ ತನ್ನ ಸೇವೆಗಳ ಬೆಲೆಯಲ್ಲಿ ಏರಿಕೆ ಮಾಡಿರುವ ಕಾರಣ ಜಿಯೋ ಈ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಿದೆ.
ಹಾಸನದಲ್ಲಿ ಪುಡಿ ರೌಡಿಗಳ ದಾಂಧಲೆ: ಇಬ್ಬರ ಹೆಡೆಮುರಿಕಟ್ಟಿದ ಖಾಕಿ, ಉಳಿದವರಿಗಾಗಿ ಶೋಧ
ಸೆಪ್ಟೆಂಬರ್ 1, 2021ರಿಂದ ಹೊಸ ಪ್ಲಾನ್‌ಗಳು ರೀಚಾರ್ಜ್ ಮಾಡಲು ಲಭ್ಯವಿರಲಿವೆ. ಡಿಸ್ನಿ+ ಹಾಟ್‌ಸ್ಟಾರ್ ಜೊತೆಗೆ ಅನಿಯಮಿತ ಕರೆ, ಎಸ್‌ಎಂಎಸ್ ಹಾಗೂ ಜಿಯೋ ಅಪ್ಲಿಕೇಶನ್‌ಗಳ ಒಂದು ವರ್ಷದ ಚಂದಾದಾರಿಕೆ ಸಹ ಹೊಸ ಪ್ಲಾನ್‌ಗಳಲ್ಲಿ ಇದೆ.