ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ರಾಖಿಗೂ ಮುನ್ನ ಭರ್ಜರಿ ಉಡುಗೊರೆ ನೀಡಿದೆ. ಜಿಯೋ ತನ್ನ 399 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಬೆಲೆಯನ್ನು 299 ರೂಪಾಯಿಗೆ ಇಳಿಸಿದೆ.
ಕಂಪನಿಯ ಅಧಿಕೃತ ವೆಬ್ಸೈಟ್ನ ಪ್ರಕಾರ, ಯಾವುದೇ ಜಿಯೋ ಬಳಕೆದಾರರು 399 ಅಥವಾ ಅದಕ್ಕಿಂತ ಹೆಚ್ಚಿನ ಪ್ರಿಪೇಯ್ಡ್ ಯೋಜನೆಯನ್ನು ಸಕ್ರಿಯಗೊಳಿಸಿದರೆ, ಅವರಿಗೆ 100 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ. ಅಂದ್ರೆ ಗ್ರಾಹಕರು 399 ರೂಪಾಯಿ ಯೋಜನೆ ರಿಚಾರ್ಜ್ ಮಾಡಿದ್ರೆ ಅವರಿಗೆ 100 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಅಂದ್ರೆ ಈ ಯೋಜನೆ 299 ರೂಪಾಯಿಗೆ ಸಿಕ್ಕಂತಾಗುತ್ತದೆ.
ಜಿಯೋ ಈ ರಿಚಾರ್ಜ್ ಪ್ಲಾನ್ ಲಾಭ ಪಡೆಯಲು ಮೈಜಿಯೋ ಅಪ್ಲಿಕೇಶನ್ ಅಥವಾ jio.com ಗೆ ಭೇಟಿ ನೀಡಬೇಕು. ಮೊಬಿಕ್ವಿಕ್ ಮೂಲಕ ಹಣ ಪಾವತಿ ಮಾಡಬೇಕು.
ಜಿಯೋದ ಈ ಕೊಡುಗೆ ಸೀಮಿತ ಸಮಯಕ್ಕೆ ಮಾತ್ರ ಸಿಗಲಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಆಗಸ್ಟ್ 1 ಮತ್ತು ಆಗಸ್ಟ್ 31 ರ ನಡುವೆ ರೀಚಾರ್ಜ್ ಮಾಡುವ ಗ್ರಾಹಕರಿಗೆ ಮಾತ್ರ 100 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಕೊಡುಗೆಯನ್ನು ಒಮ್ಮೆ ಮಾತ್ರ ಪಡೆಯಬಹುದು.