ಧಮಾಕಾ ಯೋಜನೆಗಳನ್ನು ಗ್ರಾಹಕರಿಗೆ ನೀಡುವುದ್ರಲ್ಲಿ ರಿಲಾಯನ್ಸ್ ಜಿಯೋ ಮುಂದಿದೆ.
ಟೆಲಿಕಾಂ ಕಂಪನಿಗಳಿಗೆ ಕಠಿಣ ಸ್ಪರ್ಧೆ ನೀಡುವ ಜಿಯೋ, ಆಗಾಗ ಭರ್ಜರಿ ಆಫರ್ ಗಳನ್ನು ನೀಡ್ತಿರುತ್ತದೆ. ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲು ಕಂಪನಿ ಕೆಲ ಯೋಜನೆಗಳನ್ನು ಶುರು ಮಾಡಿದೆ. ವಿಮಾನದಲ್ಲಿ ಕುಳಿತುಕೊಂಡು ಇಂಟರ್ನೆಟ್, ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಗಳು ಉಚಿತ ಅಂತರಾಷ್ಟ್ರೀಯ ರೋಮಿಂಗ್‌ನೊಂದಿಗೆ ಬರುತ್ತವೆ.
ಜಿಯೋ ಇನ್ ಫ್ಲೈಟ್ ಕನೆಕ್ಟಿವಿಟಿ ಪ್ಯಾಕನ್ನು 22 ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲಿ ಬಳಸಬಹುದು. ಈ ಯೋಜನೆಗಳಲ್ಲಿ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೌಲಭ್ಯ ಸಿಗುತ್ತದೆ. ಕೆಲ ವಿಮಾನಯಾನ ಸಂಸ್ಥೆಗಳಲ್ಲಿ ಮಾತ್ರ ಕರೆ ಸೇವೆ ಲಭ್ಯವಿರುತ್ತದೆ.
ಜಿಯೋ, 499 ರೂಪಾಯಿಗಳ ಇನ್ ಫ್ಲೈಟ್ ಸಂಪರ್ಕ ಯೋಜನೆಯನ್ನು ನೀಡುತ್ತದೆ. ಇದ್ರ ಸಿಂಧುತ್ವ ಒಂದು ದಿನ ಮಾತ್ರ. ಇದರಲ್ಲಿ 250 ಎಂಬಿ ಡೇಟಾ ಸಿಗುತ್ತದೆ. 100 ಎಸ್ಎಂಎಸ್ ಲಭ್ಯವಿದೆ. ಒಳಬರುವ ಕರೆಗಳ ಸೌಲಭ್ಯ ಇದರಲ್ಲಿ ಲಭ್ಯವಿಲ್ಲ.
ಇನ್ನೊಂದು 699 ರೂಪಾಯಿ ಇನ್ ಫ್ಲೈಟ್ ಸಂಪರ್ಕ ಯೋಜನೆ. ಇದ್ರ ಸಿಂಧುತ್ವ ಕೂಡ ಒಂದು ದಿನ. ಇದರಲ್ಲಿ 500 ಎಂಬಿ ಡೇಟಾ ಸಿಗುತ್ತದೆ. ಕರೆಗೆ 100 ನಿಮಿಷಗಳು ಮತ್ತು 100 ಎಸ್ಎಂಎಸ್ ಸಿಗಲಿದೆ. ಇದ್ರಲ್ಲೂ ಒಳಬರುವ ಕರೆಗಳು ಲಭ್ಯವಿಲ್ಲ.
ಜಿಯೋ ರೂ. 999 ಇನ್ ಫ್ಲೈಟ್ ಸಂಪರ್ಕ ಯೋಜನೆ
ಜಿಯೋದ 999 ರೂಪಾಯಿಗಳ ಈ ಪ್ಲಾನ್‌ನ ಸಿಂಧುತ್ವವು 1 ದಿನ. ಇದರಲ್ಲಿ 1 ಜಿಬಿ ಡೇಟಾ, 100 ಹೊರಹೋಗುವ ನಿಮಿಷಗಳ ಕರೆಗಳು ಮತ್ತು 100 ಎಸ್ಎಂಎಸ್ ಸಿಗಲಿದೆ. ಇದರಲ್ಲಿ ಕೂಡ ಒಳಬರುವ ಕರೆಗಳ ಸೌಲಭ್ಯವಿಲ್ಲ.