
ಅಗ್ಗದ ಯೋಜನೆಗಳನ್ನು ನೀಡುವ ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋ, ಅಗ್ಗದ ಪ್ಲಾನ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಆದ್ರೆ ಈಗ ಜಿಯೋ, ಗ್ರಾಹಕರಿಗೆ ಶಾಕ್ ನೀಡಿದೆ.
ಜಿಯೋದ ಅಗ್ಗದ ಎರಡು ಯೋಜನೆಗಳು ಬಂದ್ ಆಗಿವೆ. 39 ರೂಪಾಯಿ ಯೋಜನೆ ಮತ್ತು 69 ರೂಪಾಯಿ ಯೋಜನೆ ವೆಬ್ಸೈಟ್ ನಲ್ಲಿ ಕಾಣ್ತಿಲ್ಲ. ಈ ಎರಡೂ ಯೋಜನೆಗಳು ಗ್ರಾಹಕರನ್ನು ಆಕರ್ಷಿಸಿದ್ದವು. ಆದ್ರೆ ಈಗ ಜಿಯೋ ಈ ಎರಡೂ ಯೋಜನೆಯನ್ನು ಬಂದ್ ಮಾಡಿದೆ. ಈ ಹಿಂದೆ ಜಿಯೋ ಶುರು ಮಾಡಿದ್ದ ಗೆಟ್ ಒನ್ ಫ್ರೀ ಒನ್ ಬೈ ಆಫರ್ ಕೂಡ ನಿಲ್ಲಿಸಿದೆ.
ಜಿಯೋ ಫೋನಿನ ಅಗ್ಗದ ಯೋಜನೆಯಾಗಿದ್ದ 39 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 100 ಎಂಬಿ ಡೇಟಾ ಸಿಗ್ತಿತ್ತು. ಇದು 14 ದಿನಗಳ ಸಿಂಧುತ್ವ ಹೊಂದಿತ್ತು. ಎಲ್ಲ ನೆಟ್‌ವರ್ಕ್‌ಗಳಿಗೂ ಅನಿಯಮಿತ ಕರೆ ಸೌಲಭ್ಯ ನೀಡಲಾಗಿತ್ತು. 39 ರೂಪಾಯಿ ಈ ಪ್ಲಾನ್ ನಲ್ಲಿ 1.4 ಜಿಬಿ ಡೇಟಾ ಲಭ್ಯವಿತ್ತು.
ಇನ್ನು, 69 ರೂಪಾಯಿ ಪ್ಲಾನ್ ಕೂಡ ಜಿಯೋ ವೆಬ್‌ಸೈಟ್‌ನಲ್ಲಿ ಕಾಣ್ತಿಲ್ಲ. ಈ ಯೋಜನೆ ಕೂಡ 14 ದಿನಗಳ ಸಿಂಧುತ್ವ ಹೊಂದಿತ್ತು. ದಿನಕ್ಕೆ 0.5 ಜಿಬಿ ಡೇಟಾ ಲಭ್ಯವಿತ್ತು. ಉಚಿತ ಕರೆ ಜೊತೆ ಜಿಯೋ ಅಪ್ಲಿಕೇಷನ್ ಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿತ್ತು.