ಅಗ್ಗದ ಪ್ಲಾನ್ ನೀಡುವುದ್ರಲ್ಲಿ ರಿಲಯನ್ಸ್ ಜಿಯೋ ಮುಂದಿದೆ. ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನ ನೀಡುವ ಜಿಯೋ ಧಮಾಲ್ ಮಾಡ್ತಿದೆ. ಹೆಚ್ಚಿನ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ನೀಡುವ ಅನೇಕ ಪ್ಲಾನ್ ಗಳು ಜಿಯೋ ಬಳಿಯಿದೆ. 200 ರೂಪಾಯಿಗಿಂತ ಕಡಿಮೆ ಬೆಲೆಯ ಜಿಯೋ ಪ್ಲಾನ್ ನಲ್ಲಿ ಗ್ರಾಹಕರಿಗೆ 1ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಮತ್ತು ಅನೇಕ ಸೌಲಭ್ಯ ಸಿಗ್ತಿದೆ.
ಜಿಯೋ ಫೋನ್ ಗ್ರಾಹಕರಿಗೆ ಕಂಪನಿ 186 ರೂಪಾಯಿ ಯೋಜನೆ ನೀಡ್ತಿದೆ. ಇದು 28 ದಿನಗಳ ಮಾನ್ಯತೆ ಹೊಂದಿದೆ. ಈ ಯೋಜನೆಯಲ್ಲಿ ಪ್ರತಿದಿನ 1ಜಿಬಿ ಡೇಟಾ ಲಭ್ಯವಿದೆ. ಅಂದರೆ, ಯೋಜನೆಯಲ್ಲಿ ಒಟ್ಟು 28 ಜಿಬಿ ಡೇಟಾವನ್ನು ನೀಡಲಾಗಿದೆ. ದಿನದ ಡೇಟಾದ ಅಂತ್ಯದ ನಂತರ, ಇಂಟರ್ನೆಟ್ ವೇಗವು 64 ಕೆಬಿಪಿಎಸ್ ಗೆ ಇಳಿಯಲಿದೆ.
ಈ ಯೋಜನೆಯಲ್ಲಿ ಗ್ರಾಹಕರಿಗೆ ಡೇಟಾ ಮಾತ್ರವಲ್ಲ 100 ಎಸ್ ಎಂಎಸ್ ಲಭ್ಯವಿದೆ. ಬಳಕೆದಾರರು ಅನಿಯಮಿತ ಕರೆ ಮಾಡುವ ಸೌಲಭ್ಯವನ್ನು ಸಹ ಪಡೆಯುತ್ತಾರೆ. ಜಿಯೋ ಮೂವಿ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಗ್ರಾಹಕರಿಗೆ ಕಂಪನಿ ಈ ಯೋಜನೆ ಮೂಲಕ ನೀಡ್ತಿದೆ.