
ಅಗ್ಗದ ಯೋಜನೆ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ರಿಲಯನ್ಸ್ ಜಿಯೋ ಮುಂದಿದೆ. ರಿಲಾಯನ್ಸ್ ಜಿಯೋ, ಕಡಿಮೆ ಬೆಲೆಗೆ ಅನೇಕ ಯೋಜನೆಗಳನ್ನು ಗ್ರಾಹಕರಿಗೆ ನೀಡ್ತಿದೆ. ಜಿಯೋ ರೂ. 149 ಯೋಜನೆ
ಜಿಯೋದ ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ 149 ರೂಪಾಯಿ ಯೋಜನೆ ಒಂದು. ಈ ಯೋಜನೆಗಾಗಿ, ಜಿಯೋ ಗ್ರಾಹಕರಿಂದ 149 ರೂಪಾಯಿಗಳನ್ನು ವಸೂಲಿ ಮಾಡುತ್ತದೆ. ಇದ್ರಲ್ಲಿ ಪ್ರತಿ ದಿನ 1ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆಗಳು ಮತ್ತು 100 ಎಸ್ಎಂಎಸ್ ಸಿಗಲಿದೆ. ಇದ್ರ ಸಿಂಧುತ್ವ 24 ದಿನಗಳು. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋಕ್ಲೌಡ್ ಮುಂತಾದ ಎಲ್ಲಾ ಜಿಯೋ ಆಪ್‌ಗಳ ಉಚಿತ ಚಂದಾದಾರಿಕೆಯೂ ಈ ಯೋಜನೆಯಲ್ಲಿ ಲಭ್ಯವಿರುತ್ತದೆ.
ಜಿಯೋದ ಇನ್ನೊಂದು ಅಗ್ಗದ ಯೋಜನೆ ಬೆಲೆ 129 ರೂಪಾಯಿ. ಈ ಯೋಜನೆಯ ಸಿಂಧುತ್ವ 28 ದಿನಗಳು. ಗ್ರಾಹಕರು ಒಟ್ಟು 2ಜಿಬಿ ಡೇಟಾ ಹಾಗೂ ಎಲ್ಲಾ ಜಿಯೋ ಆಪ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಲಿದ್ದಾರೆ. ಗ್ರಾಹಕರು ಒಟ್ಟು 300 ಎಸ್ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳು ಲಭ್ಯವಿದೆ.
98 ರೂಪಾಯಿ ಪ್ಲಾನ್, ರಿಲಯನ್ಸ್ ಜಿಯೋದ ಅಗ್ಗದ ರೀಚಾರ್ಜ್ ಪ್ಲಾನ್ ಆಗಿದೆ. ಇದು 14 ದಿನಗಳವರೆಗೆ ಮಾನ್ಯವಾಗಿರುತ್ತದೆ. 14 ದಿನಗಳವರೆಗೆ ಚಂದಾದಾರರು ಪ್ರತಿದಿನ 1.5ಜಿಬಿ ಡೇಟಾ ಪಡೆಯಲಿದ್ದಾರೆ. ಈ ಯೋಜನೆಯಲ್ಲಿಯೂ, ಗ್ರಾಹಕರು ಅನಿಯಮಿತ ಧ್ವನಿ ಕರೆ ಮತ್ತು ಎಲ್ಲಾ ಜಿಯೋ ಆಪ್‌ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತಾರೆ.