ಕೆಲ ದಿನಗಳ ಹಿಂದಷ್ಟೆ ರಿಲಯನ್ಸ್ ಜಿಯೋ ತನ್ನ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಜಿಯೋ ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಕಡಿಮೆ ಬೆಲೆಗೆ ಹೆಚ್ಚಿನ ಡೇಟಾ ಪ್ಲಾನ್ ಕೂಡ ಜಿಯೋ ಬಳಿಯಿದೆ. ಕೆಲ ಯೋಜನೆಗಳಲ್ಲಿ ಪ್ರತಿ ದಿನ ಜಿಯೋ 3ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡ್ತಿದೆ. ಜಿಯೋದ ಕೆಲ ಯೋಜನೆಗಳ ವಿವರ ಇಲ್ಲಿದೆ.
ರಿಲಯನ್ಸ್ ಜಿಯೋ 28 ದಿನಗಳ ಯೋಜನೆ ಬೆಲೆ 601 ರೂಪಾಯಿ. ಪ್ರತಿ ದಿನ 3ಜಿಬಿ ಡೇಟಾ ಗ್ರಾಹಕರಿಗೆ ಸಿಗ್ತಿದೆ. ಇದರ ಹೊರತಾಗಿ, ಪ್ಲಾನ್‌ನಲ್ಲಿ 6ಜಿಬಿ ಹೆಚ್ಚುವರಿ ಡೇಟಾ ಲಭ್ಯವಿದೆ. ಯೋಜನೆಯಲ್ಲಿ ಒಟ್ಟು 90ಜಿಬಿ ಡೇಟಾವನ್ನು ನೀಡಲಾಗ್ತಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು 100 ಎಸ್ಎಂಎಸ್ ಲಭ್ಯವಿದೆ. ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಲಭ್ಯವಿದೆ.
ಇನ್ನು ಜಿಯೋದ ಇನ್ನೊಂದು ಯೋಜನೆ ಬೆಲೆ 419 ರೂಪಾಯಿಯಾಗಿದೆ. ಇದರಲ್ಲೂ ಪ್ರತಿದಿನ 3ಜಿಬಿ ಡೇಟಾ ಲಭ್ಯವಿದೆ. ಈ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಲಭ್ಯವಿಲ್ಲ. 419 ರೂಪಾಯಿ ಯೋಜನೆಯಲ್ಲಿ ಒಟ್ಟು 84ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಇದರಲ್ಲಿ ಸಿಗ್ತಿದೆ. ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಕೂಡ ಲಭ್ಯವಿದೆ. ಇದಲ್ಲದೆ 533 ರೂಪಾಯಿ ಪ್ಲಾನ್ ನಲ್ಲೂ 3ಜಿಬಿ ಡೇಟಾ ಪ್ರತಿ ದಿನ ಸಿಗಲಿದೆ.