ಗುಜರಾತ್ ನ ಜಾಮ್ ನಗರದಲ್ಲಿ ರಿಲಯನ್ಸ್ ಫೌಂಡೇಶನ್ ನಿಂದ 1000 ಬೆಡ್ ಹೊಂದಿರುವ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರದ ಸೋಂಕಿತರೆಲ್ಲರಿಗೂ ಉಚಿತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ. ನೀತಾ ಅಂಬಾನಿ ನೇತೃತ್ವದ ರಿಲಯನ್ಸ್ ಫೌಂಡೇಶನ್ ವತಿಯಿಂದ ಅಗತ್ಯವಿರುವ ಕಡೆ ವೈದ್ಯಕೀಯ ಸೌಕರ್ಯ, ನೆರವು ಕಲ್ಪಿಸಲಾಗುತ್ತಿದೆ.
ಗುಜರಾತ್ ನ ಜಾಮ್ ನಗರದಲ್ಲಿ ರಿಲಯನ್ಸ್ ಫೌಂಡೇಶನ್ ನಿಂದ ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿರುವ 400 ಬೆಡ್ ಗಳ ಸೆಂಟರ್ ಅನ್ನು ಇನ್ನೊಂದು ವಾರದಲ್ಲಿ ನಿರ್ಮಿಸಲಿದ್ದು, ಎರಡನೇ ಹಂತದಲ್ಲಿ 600 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಲಭ್ಯವಾಗಲಿದೆ.
ಜಾಮ್ ನಗರದ ಸರ್ಕಾರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಇದನ್ನು ನಿರ್ವಹಿಸಲಿದೆ. ಈ ಕೋವಿಡ್ ಕೇರ್ ಸೆಂಟರ್ ಗೆ ಅಗತ್ಯವಿರುವ ವೈದ್ಯಕೀಯ ಉಪಕರಣ ಇತರೆ ವಸ್ತುಗಳು ಮತ್ತು ಸೌಲಭ್ಯವನ್ನು ರಿಲಯನ್ಸ್ ಸಂಸ್ಥೆ ಪೂರೈಕೆ ಮಾಡಲಿದೆ. ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಸರ್ಕಾರ ನಿಯೋಜಿಸಲಿದೆ.