ಮುಂಬರುವ ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗ ಮೊದಲ ಪಟ್ಟಿಯನ್ನು ಘೋಷಿಸಿದ ಒಂದು ದಿನದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೆಲವು ತಿದ್ದುಪಡಿಗಳನ್ನು ಮಾಡಿದ ನಂತರ ಅಸ್ಸಾಂ ರಾಜ್ಯಕ್ಕೆ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಸ್ಸಾಂ ರಾಜ್ಯದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಂಸದೀಯ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರನ್ನು ಸರಿಪಡಿಸಲಾಗಿದೆ” ಎಂದು ಹೊಸ ಪಟ್ಟಿಯನ್ನು ಹಂಚಿಕೊಂಡಿದೆ.
ಹೊಸ ಪಟ್ಟಿಯ ಪ್ರಕಾರ, ದಿಲೀಪ್ ಸೈಕಿಯಾ ದರ್ರಾಂಗ್ ಉದಲ್ಗಿರಿಯಿಂದ, ಅಮರ್ ಸಿಂಗ್ ಟಿಸ್ಸೊ ದಿಫುನಿಂದ, ರಂಜಿತ್ ದತ್ತಾ ತೇಜ್ಪುರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಸುರೇಶ್ ಬೋರಾ ನಾಗಾವ್ ನಿಂದ ಮತ್ತು ಕಾಮಾಕ್ಯ ಪ್ರಸಾದ್ ತಾಸಾ ಕಾಜಿರಂಗದಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿಯ ಹಳೆಯ ಮಿತ್ರ ಪಕ್ಷವಾದ ಅಸ್ಸಾಂ ಗಣ ಪರಿಷತ್ (ಎಜಿಪಿ) ಗೆ ಎರಡು ಸ್ಥಾನಗಳನ್ನು ನೀಡಲಾಗಿದ್ದು, ಒಂದು ಸ್ಥಾನವನ್ನು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ಮುಖ್ಯಸ್ಥ ಪ್ರಮೋದ್ ಬೊರೊ ಅವರ ಪಕ್ಷವಾದ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಗೆ ಹಂಚಿಕೆ ಮಾಡಲಾಗಿದೆ.