ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳ 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಮೌಲ್ಯಾಂಕನ ಚಟುವಟಿಕೆಗಳಿಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಅನುದಾನ ಬಿಡುಗಡೆ ಮಾಡಿದ್ದು, ತಿಂಗಳೋಳಗೆ ಖರ್ಚ ವೆಚ್ಚದ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಮಾರ್ಚ್ 11, 12 ಮತ್ತು 25 ರಿಂದ 28 ರ ವರೆಗೆ ರಾಜ್ಯದಲ್ಲಿ ಮೌಲ್ಯಂಕನ ಪರೀಕ್ಷೆ ನಡೆಸಲಾಗಿದೆ. ಮೌಲ್ಯಾಂಕನಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳಿಗೆ ಅನುದಾನವನ್ನು ಡಿಡಿಪಿಐ ಖಾತೆಗೆ ಬಿಡುಗಡೆ ಮಾಡಲಾಗಿದೆ.
ಮೌಲ್ಯಮಾಪನ ಬಳಿಕ ಶಾಲೆಗಳಿಗೆ ವಾಪಸ್ ಮರು ರವಾನೆಗಾಗಿ ಕ್ಲಸ್ಟರ್ ಗಳಿಗೆ 1,500 ರೂ. ಬಳಕೆ ಮಾಡುವುದು. ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಪ್ರತಿ ಮೌಲ್ಯಮಾಪಕರಿಗೆ ದಿನವೊಂದಕ್ಕೆ 100 ರೂ.ಗಳಂತೆ ಗೌರವ ಸಂಭಾವನೆ ನೀಡುವುದು, ಬ್ಲಾಕ್ ಹಂತದಲ್ಲಿ ಪ್ರತಿ ಕೇಂದ್ರಕ್ಕೆ ಪ್ರತಿ ತರಗತಿಗೆ ತಲಾ 2 ಸಾವಿರ ರೂ.ಗಳಂತೆ 6 ಸಾವಿರ ನೀಡಬೇಕು. ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಿಗೆ ತಲಾ 10,000 ರೂ.ಗಳಂತೆ 30 ಸಾವಿರ ರೂ. ನೀಡಬೇಕು ಎಂದು ಹೇಳಲಾಗಿದೆ.