ತುಮಕೂರು: ಬರ ಪರಿಹಾರದಲ್ಲಿ ಕೇಂದ್ರದ ನೀತಿ ಸ್ಪಷ್ಟವಾಗಿದೆ ಎಂದು ಕೇಂದ್ರ ಸರ್ಕಾರದ ನಡೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಇರುವ ಯೋಜನೆಗಳಲ್ಲಿ ಕೇಂದ್ರದ ಪಾಲು ನೀಡಿದ ನಂತರ ಅನೇಕ ರಾಜ್ಯಗಳು ತಮ್ಮ ಪಾಲನ್ನು ನೀಡದಿರುವುದು ಕಂಡುಬಂದಿದ್ದು, ಅದನ್ನು ತಪ್ಪಿಸಲು ಜಂಟಿ ಖಾತೆ ತೆರೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೆಸರಲ್ಲಿ ಜಂಟಿ ಖಾತೆ ಆರಂಭವಾದ ಕೂಡಲೇ ಹಣ ಬಿಡುಗಡೆಯಾಗಲಿದೆ. ಯೋಜನೆಯ ಹಣ ಶೇಕಡ 100ರಷ್ಟು ಬಳಕೆಯಾಗಲು ನೀತಿ ರೂಪಿಸಲಾಗಿದೆ. ರಾಜ್ಯ ಸರ್ಕಾರ ಈ ಕೆಲಸ ಮಾಡಲಿ. ಹಣಕಾಸು ನೆರವು ನೀಡಲು ಕೇಂದ್ರ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.