ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹಿಂದ್ರಾ, ಯಾವಾಗಲೂ ಆಸಕ್ತಿಕರ ಪೋಸ್ಟ್‌ಗಳ ಮೂಲಕ ತಮ್ಮ ಅನುಯಾಯಿಗಳ ಗಮನ ಸೆಳೆಯುತ್ತಾರೆ.
1936ರಲ್ಲಿ ಸೆರೆ ಹಿಡಿಯಲಾದ ಬ್ರಿಟನ್‌ನ ಮೊದಲ ವಿಮಾನಯಾನ ಸಂಸ್ಥೆಯಾದ ಇಂಪೀರಿಯಲ್ ಏರ್‌ವೇಸ್‌ನ ವಿಮಾನವೊಂದರ ಒಳಾಂಗಣದ ಚಿತ್ರವೊಂದನ್ನು ಆನಂದ್ ಮಹಿಂದ್ರಾ ಶೇರ್ ಮಾಡಿಕೊಂಡಿದ್ದಾರೆ. ವಿಮಾನದ ಒಳಗೆ ಮರದ ಕುರ್ಚಿಗಳು ಒಂದರ ಹಿಂದೆ ಒಂದಾಗಿ ಸಾಲಿನಲ್ಲಿ ಇಡಲಾಗಿರುವುದನ್ನು ನೋಡಬಹುದಾಗಿದೆ.
ಇದಪ್ಪ ವರಸೆ…! ದಾರಿಯಲ್ಲಿ ಕೆಟ್ಟು ನಿಂತ ವಾಹನ ತಳ್ಳುವಂತೆ ವಿಮಾನವನ್ನೇ ತಳ್ಳಿದ ಪ್ರಯಾಣಿಕರು…!!
ವಿಮಾನದ ಒಳಾಂಗಣವು ನಾವು ಇಂದು ನೋಡುವುದಕ್ಕಿಂತ ಭಾರೀ ಭಿನ್ನವಾಗಿ ಕಾಣುತ್ತಿದೆ. ಕಿಟಕಿಗಳು ಇನ್ನಷ್ಟು ದೊಡ್ಡದಿದ್ದು, ಎರಡೂ ಬದಿಗಳಲ್ಲಿ ಪರದೆಗಳನ್ನು ಹೊಂದಿವೆ.
ಚಿತ್ರದಲ್ಲಿರುವ ಕುರ್ಚಿಗಳು ಯಾವುದೋ ಖಾಸಗಿ ಉದ್ಯಾನದಲ್ಲಿಟ್ಟಿರುವ ಕುರ್ಚಿಗಳಂತೆ ಕಾಣುತ್ತಿವೆ.