ಬೆಂಗಳೂರು : ನಟಿ ಪವಿತ್ರಾ ಗೌಡ ಮಾಲೀಕತ್ವದ ರೆಡ್ ಕಾರ್ಪೆಟ್ ಸ್ಟುಡಿಯೋ -777 ಇಂದು ರಿ ಲಾಂಚ್ ಆಗುತ್ತಿದೆ.
ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ರೆಡ್ ಕಾರ್ಪೆಟ್ ಸ್ಟುಡಿಯೋ-777 ಇಂದು ರಿ ಲಾಂಚ್ ಆಗುತ್ತಿದ್ದು, ಇದಕ್ಕೆ ಭರದ ಸಿದ್ದತೆಗಳು ನಡೆಯುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಜೈಲು ಸೇರಿದ್ದರಿಂದ ಕಳೆದ 8 ತಿಂಗಳಿನಿಂದ ಸ್ಟುಡಿಯೋ ಕ್ಲೋಸ್ ಆಗಿತ್ತು. ಪವಿತ್ರಾ ಗೌಡ ಜೈಲಿನಿಂದ ರಿಲೀಸ್ ಆಗಿ 2 ತಿಂಗಳಾಗಿದ್ದು, ಈಗ ಸ್ಟುಡಿಯೋ ರಿ ಲಾಂಚ್ ಆಗುತ್ತಿದೆ. ಬಹಳ ಸಿಂಪಲ್ ಆಗಿ ಪವಿತ್ರಾ ಗೌಡ ಇಂದು ಸ್ಟುಡಿಯೋ ರಿ ಲಾಂಚ್ ಮಾಡುತ್ತಿದ್ದಾರೆ.
ಏನೆಲ್ಲಾ ಸಿಗಲಿದೆ..?
ರೆಡ್ ಕಾರ್ಪೆಡ್ ಸ್ಟುಡಿಯೋದಲ್ಲಿ ಮಹಿಳೆಯರಿಗೆ ಬೇಕಾದ ಇಂಡೋ ವೆಸ್ಟರ್ನ್ ಶೈಲಿಯ ಉಡುಗೊರೆಗಳು ಸಿಗುತ್ತಿದ್ದವು. ಅಲ್ಲದೇ ಮಹಿಳೆಯರ ಡಿಸೈನರ್ ಸೀರೆ, ಲೆಹಂಗಾ ಸೇರಿ ಹಲವು ಕಾಸ್ಟ್ಯೂಮ್ ಸಿಗುತ್ತಿದ್ದವು. ಈಗ ಇದರ ಜೊತೆ ಸೀರೆ ಕಲೆಕ್ಷನ್ ಕೂಡ ಹೆಚ್ಚಳ ಮಾಡಿದ್ದಾರೆ. ಪ್ರೇಮಿಗಳ ದಿನಾಚರಣೆಯಂದೇ ತಮ್ಮ ಕನಸಿನ ರೆಡ್ ಕಾರ್ಪೆಟ್ ಸ್ಟುಡಿಯೋ-777 ಲಾಂಚ್ ಆಗುತ್ತಿದೆ.