ಸಂಬಂಧ ಗಟ್ಟಿಯಾಗಿರಲು, ಗೌರವ, ನಂಬಿಕೆ ಮುಖ್ಯವಾಗುತ್ತದೆ. ಕೆಲವೊಮ್ಮೆ ಜನರು ಸಂಬಂಧ ಉಳಿಸಿಕೊಳ್ಳಲು ತಮ್ಮನ್ನು ತಾವು ಸಂಪೂರ್ಣ ಸಮರ್ಪಿಸಿಕೊಳ್ತಾರೆ. ಇದು ಒಳ್ಳೆಯದಲ್ಲ. ಸಂಬಂಧವನ್ನು ಉಳಿಸಲು ಕೆಲ ತಪ್ಪುಗಳನ್ನು ಮಾಡಬಾರದು.
ನಿಮ್ಮನ್ನು ನೀವು ಕಳೆದುಕೊಳ್ಳುವುದು : ಸಂಬಂಧ ಉಳಿಸಿಕೊಳ್ಳಲು ಕೆಲವರು ತಮ್ಮನ್ನು ತಾವು ಮರೆತಿರುತ್ತಾರೆ. ಅಂದ್ರೆ ಅವರಿಗೆ ಅಲ್ಲಿ ಅಸ್ತಿತ್ವವೇ ಇರುವುದಿಲ್ಲ. ಆರಂಭದಲ್ಲಿ ಇದು ರೋಮ್ಯಾಂಟಿಕ್ ಎನಿಸಹುದು. ಆದ್ರೆ ಮುಂದೆ ಅದು ಉಸಿರುಗಟ್ಟಿಸುತ್ತದೆ. ಪರಸ್ಪರ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಬೇಕು. ಸಂಗಾತಿ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ನಿಮ್ಮ ಅಭಿಪ್ರಾಯವನ್ನು ಮುಚ್ಚಿಡಬಾರದು. ನಿಮ್ಮ ಅಸ್ತಿತ್ವ ಪಣಕ್ಕಿಡುವ ಪ್ರಯತ್ನ ಬೇಡ.
ನಿಮ್ಮ ಅಭಿಪ್ರಾಯ ಹೇರಿಕೆ : ಸಂಗಾತಿ ಕುರುಡಾಗಿ ನನ್ನ ಮಾತನ್ನು ಕೇಳುತ್ತಾರೆ. ನಾನು ಹೇಳಿದ್ದು ಮಾಡ್ತಾರೆ ಎಂಬ ತಪ್ಪು ಕಲ್ಪನೆಯಲ್ಲಿರಬಾರದು. ಪರಸ್ಪರ ಇಬ್ಬರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಸಂಗಾತಿ ಮಾತನ್ನೂ ಕೇಳಬೇಕು.
ಸಂಗಾತಿಯೇ ಪ್ರಪಂಚ : ನಿಮ್ಮ ಸಂಗಾತಿಯೇ ನಿಮ್ಮ ಪ್ರಪಂಚವಾದ್ರೆ ಮುಂದೆ ನಿಮಗೆ ನಿರಾಶೆ ಕಾದಿರುತ್ತದೆ. ನಿಮ್ಮ ಸಂಗಾತಿಗೆ ಪ್ರಾಮುಖ್ಯತೆ ನೀಡಬೇಕು. ಆದ್ರೆ ಸಂಗಾತಿಯ ಹೆಸರಿನಲ್ಲಿ ಉಳಿದವರನ್ನು, ಉಳಿದ ಪ್ರಪಂಚವನ್ನು ಮರೆಯಬಾರದು. ಇದು ನಿಮಗೆ ನಷ್ಟವನ್ನುಂಟು ಮಾಡುತ್ತದೆ. ಸಂಗಾತಿ ನಿಮ್ಮನ್ನು ಲಘುವಾಗಿ ಪರಿಗಣಿಸುತ್ತಾರೆ.
ಹೋಲಿಕೆ : ಪ್ರೀತಿಯನ್ನು ಹೋಲಿಕೆ ಮಾಡುವುದು ತಪ್ಪು. ಒಬ್ಬೊಬ್ಬರು ಒಂದೊಂದು ರೀತಿ ಜೀವನ ಶೈಲಿ ಹೊಂದಿರುತ್ತಾರೆ. ಅವರ ಭಾವನೆಗಳು ಭಿನ್ನವಾಗಿರುತ್ತದೆ. ಹಾಗಿರುವಾಗ ಬೇರೆಯವರ ಜೊತೆ ಹೋಲಿಕೆ ಮಾಡಬೇಡಿ.