
ಕಾಲು ಮಸಾಜ್ ಮಾಡುವ ಬಗ್ಗೆ ನಿಮಗೆ ತಿಳಿಯದಿರಬಹುದು. ಇದನ್ನು ತಜ್ಞರ ಬಳಿ ಅಥವಾ ವೈದ್ಯರ ಬಳಿ ತಿಳಿದುಕೊಳ್ಳಿ. ಆದರೆ ನಿತ್ಯ ಪಾದದ ಮಸಾಜ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ನಿಮಗೆ ಸಿಗುತ್ತವೆ ಎಂಬುದನ್ನು ನಾವು ತಿಳಿಸುತ್ತೇವೆ ಕೇಳಿ.
ನಿತ್ಯ ಮಲಗುವ ಮುನ್ನ ಹತ್ತು ನಿಮಿಷ ಪಾದಗಳ ಮಸಾಜ್ ಮಾಡುವುದರಿಂದ ಗಡದ್ದಾದ ನಿದ್ದೆ ನಿಮ್ಮನ್ನು ಆವರಿಸುತ್ತದೆ. ಹಾಗಾಗಿ ನಿದ್ರಾಹೀನತೆ ಸಮಸ್ಯೆ ಇರುವವರು ಕಷ್ಟಪಟ್ಟಾದರೂ ಮಸಾಜ್ ಮಾಡುವ ವಿಧಾನವನ್ನು ಕಲಿಯಿರಿ.
ರಕ್ತದೊತ್ತಡವನ್ನು ಕಡಿಮೆ ಮಾಡಿ ಕಾಲಿಗೆ ಸಂಪೂರ್ಣ ವಿಶ್ರಾಂತಿ ನೀಡುತ್ತದೆ. ಇಡೀ ದಿನದ ಸುಸ್ತನ್ನು ಹತ್ತು ನಿಮಿಷದಲ್ಲಿ ನಿವಾರಿಸುತ್ತದೆ. ನಿಮ್ಮ ಆಯಾಸವನ್ನು ಹೊಡೆದೋಡಿಸಿ ಆರಾಮದಾಯಕ ನಿದ್ದೆಯನ್ನು ನಿಮಗೆ ಒದಗಿಸುತ್ತದೆ.
ಪಾದಗಳನ್ನು ಮಸಾಜ್ ಮಾಡುವಾಗ ಮೊದಲು ಪಾದದ ಅಡಿಯಿಂದ ಆರಂಭಿಸಿ ಬೆರಳುಗಳ ತನಕ ಒತ್ತುತ್ತಾ ಬನ್ನಿ. ಹೆಬ್ಬೆರಳಿನ ಮೂಲಕ ಹೆಚ್ಚಿನ ಶಕ್ತಿ ಹಾಕಿ ಒತ್ತಿ. ಒಂದೊಂದೇ ಕಾಲಿನ ಬೆರಳುಗಳನ್ನು ಲಘುವಾಗಿ ಹಿಡಿದೆಳೆಯುವ ಮೂಲಕ ನಿಮ್ಮ ಮಸಾಜ್ ಅನ್ನು ಪೂರ್ಣಗೊಳಿಸಿ.