alex Certify ಪಪ್ಪಾಯಿಯ ನಿಯಮಿತ ಸೇವನೆಯಿಂದ ಇವೆ ಅನೇಕ ಆರೋಗ್ಯ ಪ್ರಯೋಜನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಪ್ಪಾಯಿಯ ನಿಯಮಿತ ಸೇವನೆಯಿಂದ ಇವೆ ಅನೇಕ ಆರೋಗ್ಯ ಪ್ರಯೋಜನಗಳು

ಪಪ್ಪಾಯ ಹಣ್ಣುಗಳನ್ನು ಕೆಲವರು ಇಷ್ಟಪಡುವುದಿಲ್ಲ. ಆದರೆ, ಒಮ್ಮೆ ಪಪ್ಪಾಯಿ ರುಚಿ ಹಿಡಿಸಿದ್ರೆ ಚಪ್ಪರಿಸಿ ತಿನ್ನುತ್ತಾರೆ. ಸಾಮಾನ್ಯವಾಗಿ ಈ ಹಣ್ಣುಗಳನ್ನು ಉಷ್ಣವಲಯದ ಹವಾಮಾನದಲ್ಲಿ ಬೆಳೆಯಲಾಗುತ್ತದೆ. ಪಪ್ಪಾಯವನ್ನು ಸೇವಿಸುವುದರಿಂದ ಬಾಯಿಗೆ ರುಚಿಯಾಗಿರುವುದು ಮಾತ್ರವಲ್ಲದೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳು ಇವೆ.

ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಎ ಹೇರಳವಾಗಿದೆ. ಫೈಬರ್ ಅಂಶವೂ ಇದರಲ್ಲಿದೆ. ಹೃದ್ರೋಗ, ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ, ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣವನ್ನು ಸುಧಾರಿಸುವುದು, ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಕೂಡ ಸಹಕಾರಿಯಾಗಿದೆ.

ಪಪ್ಪಾಯಿಯ ನಿಯಮಿತ ಸೇವನೆಯ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ.

  1. ರೋಗ ನಿರೋಧಕ ಶಕ್ತಿ ಹೆಚ್ಚಳ:

ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇವು ರೋಗಗಳು ಮತ್ತು ಸೋಂಕಿನ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ, ವಿಟಮಿನ್ ಎ, ಬಿ ಮತ್ತು ಕೆ ಕೂಡ ಸಮೃದ್ಧವಾಗಿದೆ. ಮತ್ತು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  ಹಣ್ಣಿನಲ್ಲಿರುವ ಲೈಕೋಪೀನ್ ಮತ್ತು ವಿಟಮಿನ್ ಸಿ ಹೃದ್ರೋಗವನ್ನು ತಡೆಯಲು ಸಹಕಾರಿಯಾಗಿದೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.

  1. ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು:

ಪಪ್ಪಾಯಿಯಲ್ಲಿರುವ ಲೈಕೋಪೀನ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿಯು ಸ್ತನ ಕ್ಯಾನ್ಸರ್ ಕೋಶಗಳಲ್ಲಿ ಕ್ಯಾನ್ಸರ್ ವಿರೋಧಿ ಚಟುವಟಿಕೆಗಳನ್ನು ತೋರಿಸಿದೆ ಎಂಬುದನ್ನು ಅಧ್ಯಯನದಲ್ಲಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

  1. ಆಂಟಿಆಕ್ಸಿಡೆಂಟ್:

ಪಪ್ಪಾಯಿಯು ಕ್ಯಾರೊಟಿನಾಯ್ಡ್ ಗಳನ್ನು ಹೊಂದಿದ್ದು, ವಯಸ್ಕರಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಹೀಗಾಗಿ ಪಪ್ಪಾಯವು ಇದಕ್ಕೆ ರಾಮಬಾಣವೆಂದು ಪರಿಗಣಿಸಲ್ಪಟ್ಟಿದೆ.

  1. ಉರಿಯೂತದ ವಿರುದ್ಧ ಹೋರಾಡುತ್ತದೆ:

ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪಪ್ಪಾಯ ಸಹಕಾರಿಯಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಉರಿಯೂತವನ್ನು ಕಡಿಮೆ ಮಾಡುವ ಕ್ಯಾರೊಟಿನಾಯ್ಡ್ ಗಳು ಹೇರಳವಾಗಿದೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಪಪ್ಪಾಯಿಯಲ್ಲಿ ಕಂಡುಬರುವ ಪಾಪೈನ್ ಎಂಬ ಕಿಣ್ವವು ಪ್ರೊಟೀನ್ ಅನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪಪ್ಪಾಯವು ಜೀರ್ಣಾಂಗವ್ಯೂಹದ ನಿರ್ವಹಣೆಗೆ ಸಹಾಯ ಮಾಡುವುದಲ್ಲದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

ಒಟ್ಟಿನಲ್ಲಿ ಪಪ್ಪಾಯವು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಕಾಂತಿಯುಕ್ತ ಮುಖದ ಹೊಳಪಿಗೂ ಸಹಕಾರಿಯಾಗಿದೆ. ನಿಮ್ಮ ಮುಖ ಪಳಪಳನೇ ಹೊಳೆಯಬೇಕೆಂದರೆ ಪಪ್ಪಾಯ ಫೇಸ್ ಪ್ಯಾಕ್ ಹಾಕಿದರೆ, ಉತ್ತಮ ಫಲಿತಾಂಶ ಲಭ್ಯವಾಗಲಿದೆ. ಪಪ್ಪಾಯಿ ಹಣ್ಣು ಮಾತ್ರವಲ್ಲ, ಬೀಜಗಳು, ಎಲೆಗಳು ಮತ್ತು ಬೇರುಗಳು ಸಹ ಪ್ರಯೋಜನಕಾರಿ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...