
ಬೆಂಗಳೂರು: 20 ಲಕ್ಷ ರೂಪಾಯಿಗೂ ಕಡಿಮೆ ಮೌಲ್ಯದ ಫ್ಲಾಟ್ ಗಳ ನೋಂದಣಿ ಶುಲ್ಕ ದರವನ್ನು ಶೇಕಡ 2 ರಷ್ಟು ಇಳಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಕೈಗಾರಿಕಾ ಜಮೀನಿನ ನೋಂದಣಿ ಶುಲ್ಕವನ್ನು ಕೂಡ ಇಳಿಕೆ ಮಾಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ಕೈಗಾರಿಕಾ ಜಮೀನು ನೋಂದಣಿ ಶುಲ್ಕ ಶೇಕಡ 5 ರಷ್ಟು ಇದೆ. ಅದನ್ನು ಶೇಕಡ 3 ಕ್ಕೆ ಇಳಿಕೆ ಮಾಡಲಾಗುವುದು. ಅದೇ ರೀತಿ 20 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ಫ್ಲಾಟ್ ಗಳ ನೋಂದಣಿ ಶುಲ್ಕವನ್ನು ಶೇಕಡ 3 ಕ್ಕೆ ಇಳಿಕೆ ಮಾಡಲಾಗುವುದು. 20 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಫ್ಲಾಟ್ ಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.
ಸಂಪುಟ ಸಭೆಯ ಬಳಿಕ ಈ ಕುರಿತಾಗಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಧುಸ್ವಾಮಿ ಅವರು, ನೋಂದಣಿ ಶುಲ್ಕ ಇಳಿಕೆ ಮಾಡಿರುವುದರಿಂದ ನೋಂದಣಿ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.