alex Certify BIG NEWS: ಇನ್ನು 7 ದಿನದಲ್ಲೇ ಜನನ ಪ್ರಮಾಣ ಪತ್ರ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್ನು 7 ದಿನದಲ್ಲೇ ಜನನ ಪ್ರಮಾಣ ಪತ್ರ ಲಭ್ಯ

ಬೆಂಗಳೂರು: ಆಸ್ಪತ್ರೆಯಲ್ಲಿ ಮತ್ತು ನಂತರದ ಜನನ ಪ್ರಮಾಣ ಪತ್ರ ವಿತರಿಸುವಾಗ ಇ- ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15 ರಿಂದ 7 ದಿನಗಳಿಗೆ ಕಡಿಮೆ ಮಾಡಲಾಗಿದೆ.

ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ 4ನೇ ವರದಿಯ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳಲಾಗಿದೆ.

ಜನನ ಪತ್ರವನ್ನು ನೀಡುವಾಗ ಅಧಿಕಾರಿಗಳು ಯಾವುದೇ ತಪ್ಪುಗಳನ್ನು ಮಾಡಬಾರದು ಅದನ್ನು ಸರಿಪಡಿಸುವುದು ಕಷ್ಟ ಎಂದು ಹೇಳಲಾಗಿದೆ.

ತುರ್ತು ಸಂದರ್ಭದಲ್ಲಿ ಜನನ ಪ್ರಮಾಣ ಪತ್ರವನ್ನು ಒಂದು ದಿನದೊಳಗೆ ಒದಗಿಸುವುದು.

ಅರ್ಜಿದಾರರು ಒದಗಿಸಿದ ದಾಖಲೆಗಳನ್ನು ಸುರಕ್ಷಿತ ಕಸ್ಟಡಿಯಲ್ಲಿ ಇಡಬೇಕು ಮತ್ತು ಅವರು ಮತ್ತೆ ದಾಖಲೆಗಳನ್ನು ಸಲ್ಲಿಸುವಂತೆ ಕೇಳಬಾರದು.

ಅರ್ಜಿಯ ಪ್ರಕ್ರಿಯೆಯ ಹಂತದಲ್ಲಿ ಅರ್ಜಿದಾರರಿಗೆ ಎಸ್.ಎಮ್.ಎಸ್. ಕಳುಹಿಸಲು ಮತ್ತು ಸೇವೆಯನ್ನು ಅನುಮೋದಿಸಿದಾಗ ಆನ್‌ಲೈನ್ ಮೂಲಕ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿರಬೇಕೆಂದು ಸಲಹೆ ನೀಡಲಾಗಿದೆ.

ಸೇವೆಗಳಿಗೆ ಸಕಾಲದ ಸಮಯದ ಮಿತಿಯನ್ನು 15 ದಿನಗಳಿಂದ 7 ದಿನಗಳವರೆಗೆ ಕಡಿಮೆ ಮಾಡಬಹುದು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಶಿಫಾರಸ್ಸು ಮಾಡಿದೆ.

ಜನನ ಮರಣ ನೋಂದಣಿಯ ಪ್ರಕ್ರಿಯೆಯ ಹಂತದಲ್ಲಿ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಅವರ ನಿರ್ದೇಶಕರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದವರು ಈ ಕೆಳಕಂಡಂತೆ ಕ್ರಮವಹಿಸಲಾಗಿರುತ್ತದೆ.

ಜನನ ಪ್ರಮಾಣ ಪತ್ರವನ್ನು ವಿತರಿಸುವಾಗ ಅಧಿಕಾರಿಗಳು ಯಾವುದೇ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸುವುದು.

ನೋಂದಣಿ ಕುರಿತಂತೆ ಅರ್ಜಿದಾರರಿಗೆ ಎಸ್ ಎಮ್.ಎಸ್ ಕಳುಹಿಸಲಾಗುತ್ತಿದೆ.

ಇ-ಜನ್ಮ ತಂತ್ರಾಂಶದಲ್ಲಿ ಅನುಮೋದನೆಯಾಗಿರುವ ಜನನ ಮರಣ ಪ್ರಮಾಣ ಪತ್ರದಲ್ಲಿ ಸೇವಾಸಿಂಧು

ತಂತ್ರಾಂಶದ ಮೂಲಕ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

ಸಕಾಲದಲ್ಲಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯಲು 07 ದಿನಗಳ ಕಾಲಾವಧಿಯನ್ನು ನಿಗಧಿಪಡಿಸಲಾಗಿದೆ.

ಅರ್ಜಿದಾರರು ಒದಗಿಸಿದ ದಾಖಲೆಗಳನ್ನು ಸುರಕ್ಷಿತ ಕನ್ನಡಿಯಲ್ಲಿ ಇಡಬೇಕು ಮತು ಅವರು ಮತ್ತೆ

ದಾಖಲೆಗಳನ್ನು ಸಲ್ಲಿಸಲು ಕೇಳಬಾರದು.

ಈ ಕುರಿತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಆಯುಕ್ತರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...