alex Certify BREAKING : ಬೆಂಗಳೂರಲ್ಲಿ ‘ರೀಲ್ಸ್ ‘ ಶೋಕಿ ಮಾಡುತ್ತಿದ್ದ ರೀಲ್ಸ್ ಸ್ಟಾರ್ ‘ಅರುಣ್ ಕೊಟಾರೆ’ ಅರೆಸ್ಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಲ್ಲಿ ‘ರೀಲ್ಸ್ ‘ ಶೋಕಿ ಮಾಡುತ್ತಿದ್ದ ರೀಲ್ಸ್ ಸ್ಟಾರ್ ‘ಅರುಣ್ ಕೊಟಾರೆ’ ಅರೆಸ್ಟ್..!

ಬೆಂಗಳೂರು : ಬೆಂಗಳೂರಿನಲ್ಲಿ ರೀಲ್ಸ್ ಮೂಲಕ ಶೋಕಿ ಮಾಡುತ್ತಿದ್ದ ರೀಲ್ಸ್ ಸ್ಟಾರ್ ಅರುಣ್ ಕೊಟಾರೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಬಾಡಿಗಾರ್ಡ್ ಥರ ಕೆಲವರನ್ನು ಇಟ್ಟುಕೊಂಡು ಅವರ ಕೈಗೆ ಎಕೆ 47 ಗನ್ ಕೊಟ್ಟು ಶೋ ಕೊಡುತ್ತಿದ್ದನು. ಅಲ್ಲದೇ ಮೈ ಮೇಲೆ ನಕಲಿ ಚಿನ್ನ ಧರಿಸಿಕೊಂಡು ಶೋ ಕೊಡುತ್ತಾ ಜನರನ್ನು ಬೆದರಿಸುತ್ತಿದ್ದನು ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಆರ್ಮ್ಸ್ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿ ಈತನನ್ನು ಬಂಧಿಸಿದ್ದಾರೆ. ಬೀದಿ ಬೀದಿಯಲ್ಲಿ ಗನ್ ಮ್ಯಾನ್ ಗಳನ್ನು ಇಟ್ಟುಕೊಂಡು ಈತ ಜನರನ್ನು ಬೆದರಿಸುತ್ತಿದ್ದನು ಎಂಬ ದೂರುಗಳು ಬಂದ ಹಿನ್ನೆಲೆ ಈತನನ್ನು ಪೊಲೀಸರು ಬಂಧಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...