alex Certify WATCH VIDEO : ರೀಲ್ಸ್ ಹುಚ್ಚು ; 300 ಅಡಿ ಆಳದ ಕಮರಿಗೆ ಕಾರು ಬಿದ್ದು ಯುವತಿ ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH VIDEO : ರೀಲ್ಸ್ ಹುಚ್ಚು ; 300 ಅಡಿ ಆಳದ ಕಮರಿಗೆ ಕಾರು ಬಿದ್ದು ಯುವತಿ ಸಾವು..!

ಛತ್ರಪತಿ ಸಂಭಾಜಿನಗರ : ರೀಲ್ಸ್ ಹುಚ್ಚಿಗೆ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ಸಂಭಾಜಿನಗರದ ಖುಲ್ತಾಬಾದ್ (ಛತ್ರಪತಿ ಸಂಭಾಜಿ ನಗರ) ತಾಲ್ಲೂಕಿನಲ್ಲಿ ನಡೆದಿದೆ.

ಶ್ವೇತಾ ದೀಪಕ್ ಸುರ್ವಾಸೆ ತನ್ನ ಸ್ನೇಹಿತನೊಂದಿಗೆ ಸುಲಿಭಂಜನ್ ನ ದತ್ತಧಾಮ ದೇವಾಲಯದ ಪ್ರದೇಶದಲ್ಲಿ ರೀಲ್ಸ್ ಮಾಡುತ್ತಿದ್ದಳು. ಅವಳಿಗೆ ಡ್ರೈವ್ ಬರದೇ ಇದ್ದರೂ ಕಾರು ಚಲಾಯಿಸಲು ಹೋಗಿದ್ದಾಳೆ.

ಕಾರು ರಿವರ್ಸ್ ಗೇರ್ ನಲ್ಲಿದ್ದಾಗ ಆಕಸ್ಮಾತ್ ಆಗಿ ಆಕ್ಸಿಲರೇಟರ್ ತುಳಿಸಿದ್ದಾಳೆ. ಕಾರು ಪರ್ವತದ ಬದಿಗೆ ಮತ್ತು ಕಣಿವೆಗೆ ಡಿಕ್ಕಿ ಹೊಡೆದು 300 ಅಡಿ ಆಳಕ್ಕೆ ಬಿದ್ದಿದೆ, ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಾರನ್ನು ಪರ್ವತದ ಬದಿಯಲ್ಲಿ ಹಿಮ್ಮುಖವಾಗಿ ನಿಲ್ಲಿಸಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...