ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರವಾದ ಫ್ಯಾಷನ್ ಟ್ರೆಂಡ್ ವೈರಲ್ ಆಗಿದೆ. ರೀಲ್ಸ್ ಕ್ರಿಯೇಟರ್ ಸೋನಪಾಲ್ ಶರ್ಮಾ ಎಂಬ ಯುವತಿ ಪಾವ್ ಬ್ರೆಡ್ಗಳನ್ನು ಬಳಸಿಕೊಂಡು ಡ್ರೆಸ್ ಹಾಕಿಕೊಂಡು ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ಶರ್ಮಾ ಮೊದಲು ಸಾಂಪ್ರದಾಯಿಕ ಸೆಲವರ್ ಕಮೀಜ್ ಧರಿಸಿದ್ದಾರೆ. ನಂತರ ಪಾವ್ ಬ್ರೆಡ್ಗಳನ್ನು ಬಳಸಿ ಸೀಮ್ಲೆಸ್ ಡ್ರೆಸ್ ಮಾಡಿ ಧರಿಸಿದ್ದಾರೆ. ಈ ವಿಚಿತ್ರ ಫ್ಯಾಷನ್ ಸೆನ್ಸ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕ ನೆಟ್ಟಿಗರು ಈ ರೀತಿ ಆಹಾರವನ್ನು ವ್ಯರ್ಥ ಮಾಡುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ. “ರೀಲ್ಸ್ಗಾಗಿ ಆಹಾರ ವ್ಯರ್ಥ ಮಾಡಬೇಡಿ” ಎಂದು ಕೆಲವರು ಕಿಡಿಕಾರಿದ್ದಾರೆ. “ಇವರ ಇಂಟರ್ನೆಟ್ ಕಟ್ ಮಾಡಿಬಿಡಿ” ಎಂದು ಕೆಲವರು ಕೋಪ ವ್ಯಕ್ತಪಡಿಸಿದ್ದಾರೆ.
View this post on Instagram

