ಅನುಲೋಮ-ವಿಲೋಮ ಪ್ರಾಣಾಯಾಮದ ಒಂದು ವಿಧಾನ. ಇದ್ರಲ್ಲಿ ವ್ಯಕ್ತಿ ತನ್ನ ಉಸಿರಾಟ ಕ್ರಿಯೆಗೆ ಹೆಚ್ಚಿನ ಗಮನ ನೀಡ್ತಾನೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತವನ್ನು ನೈಸರ್ಗಿಕ ವಿಧಾನದ ಮೂಲಕ ಶುದ್ಧಗೊಳಿಸುತ್ತದೆ.
ಅನುಲೋಮ-ವಿಲೋಮದಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಇದ್ರಿಂದ ದೇಹದ ಎಲ್ಲ ಅಂಗ ಉತ್ಸಾಹದಿಂದ ಕೆಲಸ ಮಾಡಲು ಶುರು ಮಾಡುತ್ತದೆ. ಇದ್ರ ಜೊತೆಗೆ ಚರ್ಮ ಕೂಡ ಹೊಳಪು ಪಡೆಯುತ್ತದೆ.
ಈ ಪ್ರಾಣಾಯಾಮ ಮಾಡಲು ಹಾಸಿಗೆ ಮೇಲೆ ಚಕ್ಕಲಪಟ್ಟೆ ಹಾಕಿ ಕುಳಿತುಕೊಳ್ಳಬೇಕು. ಬೆನ್ನು, ಕುತ್ತಿಗೆ ನೇರವಾಗಿರಲಿ. ಎಡಗೈ, ಎಡ ಮೊಣಕಾಲಿನ ಮೇಲಿರಲಿ. ಎಡ ಕೈನ ಹೆಬ್ಬರಳಿಗೆ ತೋರು ಬೆರಳು ಹಾಗೂ ಮಧ್ಯದ ಬೆರಳು ತಾಗಿರಲಿ.
ಬಲಗೈನ ತೋರು ಬೆರಳು ಹಾಗೂ ಮಧ್ಯದ ಬೆರಳು ಮುಚ್ಚಿರಲಿ. ಬಲಗೈ ಹೆಬ್ಬೆರಳಿನಿಂದ ಮೂಗಿನ ಬಲ ಭಾಗದ ಹೊಳ್ಳೆಯನ್ನು ಮುಚ್ಚಿ. ಎಡ ಹೊಳ್ಳೆಯಿಂದ ನಾಲ್ಕು ಎಣಿಸುತ್ತ ಉಸಿರು ಎಳೆದುಕೊಳ್ಳಿ. ನಂತ್ರ ಬಲ ಕೈನ ಉಂಗುರ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಿ. ಮೂರನ್ನು ಎಣಿಸಿದ ನಂತ್ರ ನಿಧಾನವಾಗಿ ಬಲ ಭಾಗದ ಹೊಳ್ಳೆಯಿಂದ ಉಸಿರು ಬಿಡಿ. ನಂತ್ರ ಎಡ ರಂಧ್ರದಿಂದ ಉಸಿರೆಳೆದುಕೊಂಡು ಬಲ ಹೊಳ್ಳೆಯಿಂದ ಬಿಡಿ. ಇದನ್ನು ಐದು ನಿಮಿಷದಿಂದ 15 ನಿಮಿಷದವರೆಗೆ ಮಾಡಬಹುದಾಗಿದೆ.
ನಿಯಮದಂತೆ ಇದನ್ನು ಮಾಡಿದಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಯೋಗ ತಜ್ಞರನ್ನು ಭೇಟಿಯಾಗಿ ತರಬೇತಿ ಪಡೆದು ಅನುಲೋಮ-ವಿಲೋಮ ಶುರುಮಾಡುವುದು ಸೂಕ್ತ.