ತಲೆ ಹೊಟ್ಟು ಸಾಮಾನ್ಯ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಶಾಂಪೂ ಹೊಟ್ಟಿನ ಸಮಸ್ಯೆಗೆ ಪರಿಹಾರ ನೀಡುವುದಿಲ್ಲ. ಕೆಲ ಮನೆ ಮದ್ದಿನ ಮೂಲಕ ತಲೆ ಹೊಟ್ಟನ್ನು ಹೋಗಲಾಡಿಸಬಹುದು.
ಪೌಷ್ಠಿಕಾಂಶದ ನಷ್ಟ ಅಥವಾ ಶುಷ್ಕತೆ ಅಥವಾ ಯಾವುದೇ ಸೋಂಕಿನಿಂದಾಗಿ ತಲೆಹೊಟ್ಟು ಉಂಟಾಗುತ್ತದೆ. ಚರ್ಮವನ್ನು ಒಳಗಿನಿಂದ ಪೋಷಿಸಿ ಆರೋಗ್ಯಕರವಾಗಿಸಬೇಕು. ಈರುಳ್ಳಿ ರಸ, ಕೂದಲು ಉದುರುವುದನ್ನು ಕಡಿಮೆ ಮಾಡಿ, ಕೂದಲು ಬೆಳವಣಿಗೆಗೆ ಸಹಾಯವಾಗುವುದು ಮಾತ್ರವಲ್ಲ, ತಲೆಹೊಟ್ಟಿಗೆ ಚಿಕಿತ್ಸೆ ನೀಡಬಲ್ಲದು. ಈರುಳ್ಳಿ ರಸ ತೆಗೆದು ನೆತ್ತಿಯ ಮೇಲೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ನಂತ್ರ ಶಾಂಪೂ ಬಳಸಿ ತಲೆಯನ್ನು ಸ್ವಚ್ಛಗೊಳಿಸಿ.
ಅಲೋವೆರಾ ಚರ್ಮಕ್ಕೆ ಮಾತ್ರವಲ್ಲ, ಕೂದಲಿಗೆ ಸಹ ಪ್ರಯೋಜನಕಾರಿ. ಅಲೋವೆರಾ ಎಲೆಯ ಜೆಲ್ ತೆಗೆದು ಫಿಲ್ಟರ್ ಮಾಡಬೇಕು. ನಂತ್ರ ಅದನ್ನು ಚರ್ಮ ಮತ್ತು ಕೂದಲಿಗೆ ಹಚ್ಚಿ 15-20 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಬಹುದು. ಅಲೋವೆರಾ ಜೆಲ್ ಗೆ 1 ಚಮಚ ನಿಂಬೆ ರಸ ಮತ್ತು 1 ಚಮಚ ತೆಂಗಿನ ಎಣ್ಣೆ ಹಾಕಿ ಮಿಕ್ಸ್ ಮಾಡಿಯೂ ಹಚ್ಚಿಕೊಳ್ಳಬಹುದು.
ಕೂದಲು ಆರೈಕೆಗೆ ಅಕ್ಕಿ ನೀರು ತುಂಬಾ ಉಪಯುಕ್ತವಾಗಿದೆ. ತಲೆಹೊಟ್ಟು ಕಡಿಮೆಯಾಗುವ ಜೊತೆಗೆ ಕೂದಲಿಗೆ ಹೊಳಪು ನೀಡುತ್ತದೆ. ಸ್ನಾನ ಮಾಡುವ ಮೊದಲು 1 ಕಪ್ ಅಕ್ಕಿಯನ್ನು 3 ಕಪ್ ನೀರಿನಲ್ಲಿ ನೆನೆಸಿ. ಸ್ನಾನ ಮಾಡುವ ಮೊದಲು ಅಕ್ಕಿಯನ್ನು ಫಿಲ್ಟರ್ ಮಾಡಿ,ತಲೆಗೆ ಶಾಂಪೂ ಹಚ್ಚಿದ ನಂತ್ರ ಈ ನೀರಿನಲ್ಲಿ ಸ್ವಚ್ಛಗೊಳಿಸಿ. ನಂತ್ರ ಶುದ್ಧ ನೀರಿನಲ್ಲಿ ತೊಳೆಯಬೇಡಿ.