ರೆಡ್ಡಿಸ್ಟ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸೆನ್ಸೇಷನ್ ಸೃಷ್ಟಿಸುತ್ತದೆ. ಇದೀಗ ಸೂರ್ಯನ 145- ಮೆಗಾಪಿಕ್ಸೆಲ್ ಚಿತ್ರವನ್ನು ಹಂಚಿಕೊಂಡಿದ್ದು, ನೆಟ್ಟಿಗರು ಅದನ್ನುಕಂಡು ಹೌಹಾರಿದ್ದಾರೆ.
ಬಿಸಿ ಪ್ಲಾಸ್ಮಾ ಉಂಡೆಯನ್ನು ಅದರ ಎಲ್ಲಾ ಭಾಗದಲ್ಲೂ ತೋರಿಸುತ್ತದೆ. ಕಪ್ಪು ಬ್ಯಾಕ್ ಗ್ರೌಂಡ್ ನಿಂದ ಸೂರ್ಯ ಹೊರಬರುತ್ತಿರುವಂತೆ ತೋರುತ್ತಿದೆ. ಚಿತ್ರವು ಕರೋನಲ್ ಮೇಲ್ಮೈಯನ್ನು ತೋರಿಸುತ್ತದೆ.
“ನಾನು ವಿಶೇಷವಾಗಿ ಮಾರ್ಪಡಿಸಿದ ದೂರದರ್ಶಕವನ್ನು ಬಳಸಿ ಸೂರ್ಯನ 145 ಮೆಗಾಪಿಕ್ಸೆಲ್ ಚಿತ್ರವನ್ನು ಸೆರೆಹಿಡಿದಿದ್ದೇನೆ. ಇನ್ನು ಹತ್ತಿರವಾಗಿಸಿ!” ಎಂದು ಶೀರ್ಷಿಕೆ ನೀಡಲಾಗಿದೆ.
ಸೂರ್ಯನ ಕ್ರಿಸ್ಟಲ್ ಕ್ಲಿಯರ್ ಫೋಟೋ ಹೇಗೆ ಸೆರೆಹಿಡಿಯುವಲ್ಲಿ ಯಶಸ್ವಿಯಾದರು ಎಂಬ ಸಂಪೂರ್ಣ ಪ್ರಕ್ರಿಯೆಯನ್ನು ಅವರು ಉಲ್ಲೇಖಿಸಿದ್ದಾರೆ.
ವಿಶೇಷವಾಗಿ ಮಾರ್ಪಡಿಸಿದ ದೂರದರ್ಶಕವನ್ನು ಬಳಸಲಾಗಿದೆ. ಏಕೆಂದರೆ ದೂರದರ್ಶಕದಲ್ಲಿ ನೇರವಾಗಿ ಸೂರ್ಯನನ್ನು ನೋಡದಂತೆ ಸಲಹೆ ನೀಡಲಾಗುತ್ತದೆ. ಸೂರ್ಯನತ್ತ ದೂರದರ್ಶಕವನ್ನು ತೋರಿಸಬೇಡಿ, ಬೆಂಕಿ ಹತ್ತಬಹುದು ಅಥವಾ ಕಣ್ಣು ಕುರುಡಾಗಬಹುದು. ಇದಕ್ಕಾಗಿ ನನ್ನ ದೂರದರ್ಶಕವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.
ಫೋಟೋದ ಮತ್ತೊಂದು ವಿಶೇಷ ಅಂಶವೆಂದರೆ ಅದರ ಎರಡು ಲೇಯರ್ ಗೋಚರತೆ. ಛಾಯಾಚಿತ್ರದ ರೆಸಲ್ಯೂಶನ್ ಮೇಲೆ ವಾತಾವರಣದ ಪ್ರಕ್ಷುಬ್ಧತೆಯ ಪರಿಣಾಮಗಳನ್ನು ನಿಗ್ರಹಿಸಲು “ಲಕ್ಕಿ ಇಮೇಜಿಂಗ್ ತಂತ್ರಗಳನ್ನು” ಅನ್ವಯಿಸಿದ್ದಾರೆ. ಬೆರಗುಗೊಳಿಸುವ ಚಿತ್ರಕ್ಕೆ ಸಾಕಷ್ಟು ಕಾಮೆಂಟ್‌ಗಳು ಮತ್ತು ಪ್ರತಿಕ್ರಿಯೆಗಳು ಬಂದಿವೆ.