ಹೈದರಾಬಾದ್: ರಕ್ತಚಂದನ ಕಳ್ಳಸಾಗಾಣೆದಾರರ ಅಟ್ಟಹಾಸಕ್ಕೆ ಕಾನ್ಸ್ಟೇಬಲ್ ಓರ್ವರು ಬಲಿಯಾಗಿರುವ ಘಟನೆ ಆಂಧ್ರಪ್ರದೇಶಲ್ಲಿ ನಡೆದಿದೆ.
ರೆಡ್ ಸ್ಯಾಂಡಲ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಕಾನ್ಸ್ಟೇಬಲ್ ಗಣೇಶ್ (30) ಮೃತರು. ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ನಿವಾಸಿಯಾಗಿರುವ ಗಣೇಶ್ ತಿರುಪತಿ ರೆಡ್ ಸ್ಯಾಂಡಲ್ ಟಾಸ್ಕ್ ಫೋರ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಅನ್ನಮಯ್ಯ ಜಿಲ್ಲೆಯಲ್ಲಿ ರಕ್ತಚಂದನ ಕಳ್ಳಸಾಗಾಣೆದಾರರ ವಿರುದ್ಧ ಕಾರ್ಯಾಚಾರಣೆ ವೇಳೆ ಕಳ್ಳರು ಪೊಲೀಸರಿಗೆ ಕಾರು ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಕಾನ್ಸ್ಟೇಬಲ್ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾಣಿಪಾಯಿ ಅರಣ್ಯ ಪ್ರದೇಶದಲ್ಲಿ ರಕ್ತಚಂದನ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಿರುಪತಿಯಿಂದ ಟಾಸ್ಕ್ ಫೋರ್ಸ್ ತಂಡ ಆಗಮಿಸಿ ಕೂಂಬಿಂಗ್ ನಡೆಸಿತ್ತು. ಈ ವೇಳೆ ಕಳ್ಳರು ಕಾರಿನಲ್ಲಿ ಪರಾರಿಯಾಗುವಾಗ ಪೊಲೀಸರಿಗೆ ಕಾರು ಡಿಕ್ಕಿ ಹೊಡೆದು ಕಾರು ಹತ್ತಿಸಿದ್ದಾರೆ. ಕಾನ್ಸ್ಟೇಬಲ್ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆದಾರೂ ಪೊಲೀಸರು ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಕಳ್ಳರನ್ನು ಸೆರೆಹಿಡಿದಿದ್ದಾರೆ. ಕೆಲವರು ಎಸ್ಕೇಪ್ ಆಗಿದ್ದಾರೆ. ಕಾರಿನಲ್ಲಿದ್ದ 7 ರಕ್ತಚಂದನದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಉಳಿದ ಕಳ್ಳರ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ.
ರಕ್ತಚಂದನ,ಕಳ್ಳಸಾಗಾಟೆ,ಕಾರು,ಕಾನ್ಸ್ಟೇಬಲ್,ಸಾವು,Red sandal smugglers,car,taskforce police,death