
ಶಿವಮೊಗ್ಗದ ಸಂತೆಕಡೂರಿನಲ್ಲಿರುವ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ 2024 -25 ನೇ ಶೈಕ್ಷಣಿಕ ಸಾಲಿನಲ್ಲಿ ಅರೆಕಾಲಿಕೆ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು.
ಪ್ರಾಥಮಿಕ ಶಿಕ್ಷಕರು
ಸಂಗೀತ, ನೃತ್ಯ ತರಬೇತುದಾರ, ಕನ್ನಡ ಭಾಷಾ ಶಿಕ್ಷಕ, ಕ್ರೀಡಾ ತರಬೇತುದಾರ, ಸ್ಟಾಪ್ ನರ್ಸ್, ಕೌನ್ಸಿಲರ್, ವಿಶೇಷ ಶಿಕ್ಷಕ ಮತ್ತು ಬಾಲವಾಟಿಕ ಶಿಕ್ಷಕರು
PGTs
ಇಂಗ್ಲಿಷ್, ಹಿಂದಿ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್
ಕಂಪ್ಯೂಟರ್ ಇನ್ಸ್ಟ್ರಕ್ಟರ್
PGTs
ಇಂಗ್ಲಿಷ್ ,ಹಿಂದಿ, ಸಂಸ್ಕೃತ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ,
ಸಂದರ್ಶನ ದಿನಾಂಕ
ಮಾರ್ಚ್ 12ರಂದು ಮಂಗಳವಾರ ಬೆಳಗ್ಗೆ 8:30 ರಿಂದ 10 ಗಂಟೆಯವರೆಗೆ ನೋಂದಣಿ, ಬೆಳಗ್ಗೆ 10.30 ರ ನಂತರ ಸಂದರ್ಶನ ನಡೆಯಲಿದೆ.
ಸಂತೆಕಡೂರು ಎನ್.ಆರ್. ಪುರ ಹೆದ್ದಾರಿ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ, ಶಿವಮೊಗ್ಗ ಇಲ್ಲಿ ಸಂದರ್ಶನ ನಡೆಯಲಿದೆ.
ನೋಂದಣಿಗೆ https://forms.gle/tXfGD1FG6K6TYjJ48 ಲಿಂಕ್ ಗಮನಿಸುವುದು.
ಸಂದರ್ಶನದ ಸಮಯದಲ್ಲಿ ಹಾಜರುಪಡಿಸಬೇಕಾದ ದಾಖಲೆಗಳು
ವಿದ್ಯಾರ್ಹತೆಯ ಮತ್ತು ಅನುಭವದ ಎಲ್ಲ ಮೂಲ ಪ್ರಮಾಣ ಪತ್ರಗಳು, ಸ್ವಯಂ ದೃಢೀಕರಿಸಿದ ವಿದ್ಯಾರ್ಹತೆಯ ಮತ್ತು ಅನುಭವದ ಎಲ್ಲಾ ನಕಲು ಪ್ರತಿಗಳು, ಒಂದು ಸೆಟ್ ಭಾವಚಿತ್ರ, ಅರ್ಹತಾ ಮಾನದಂಡಗಳ ಪ್ರಕಾರ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಬಹುದು. ನೋಂದಣಿ ನಮೂನೆ, ವಿವರವಾದ ವಿದ್ಯಾರ್ಹತೆ, ವೇತನ ಮತ್ತು ಇತರ ವಿವರಗಳಿಗಾಗಿ ಶಾಲೆಯ ವೆಬ್ಸೈಟ್ https://shivamogga.kvs.ac.in ಗಮನಿಸಿ.
ದಾಖಲೆ ಪರಿಶೀಲನೆ ಸಮಯದಲ್ಲಿ ಭರ್ತಿ ಮಾಡಿದ ನೋಂದಣಿ ನಮೂನೆಯನ್ನು ಸಲ್ಲಿಸಬೇಕಿದೆ.
ಸಂದರ್ಶನಕ್ಕೆ ಹಾಜರಾಗ ಬಯಸುವ ಅಭ್ಯರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ, ದಿನ ಭತ್ಯೆ ನೀಡುವುದಿಲ್ಲ.