ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಕ್ಲರಿಕಲ್ ಕೇಡರ್ ನ ಜೂನಿಯರ್ ಅಸೋಸಿಯೆಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಗ್ರಾಹಕರ ಸಹಾಯ ಮತ್ತು ಮಾರಾಟ ವಿಭಾಗದ 5237 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ರಾಜ್ಯದಲ್ಲಿ 509 ಹುದ್ದೆಗಳು ಖಾಲಿ ಇವೆ.
ಮಂಗಳವಾರದಿಂದಲೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೇ 17 ಅರ್ಜಿ ಸಲ್ಲಿಸಲು ಕೊನೆಯ ದಿನ. ಆನ್ಲೈನ್ನಲ್ಲಿ ಶುಲ್ಕ ಪಾವತಿಸಬೇಕಿದೆ. ಎಸ್ಸಿ,ಎಸ್ಟಿ, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದ್ದು, ಸಾಮಾನ್ಯ ವರ್ಗದವರು ಮತ್ತು ಇತರ ಹಿಂದುಳಿದ ವರ್ಗದವರು 750 ರೂ. ಪಾವತಿಸಬೇಕಿದೆ.
ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಅರ್ಜಿ ಸಲ್ಲಿಸಬೇಕು. ಪ್ರಿಲಿಮ್ಸ್ ಮತ್ತು ಮೇನ್ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯಲಿದೆ. ರಾಜ್ಯದಲ್ಲಿನ 509 ಹುದ್ದೆಗಳಲ್ಲಿ 109 ಬ್ಯಾಕ್ಲಾಗ್ ಹುದ್ದೆಗಳಿವೆ. ಸಾಮಾನ್ಯ ವರ್ಗಕ್ಕೆ 160, ಎಸ್ಸಿ ಅಭ್ಯರ್ಥಿಗಳಿಗೆ 64, ಎಸ್ಟಿ ಅಭ್ಯರ್ಥಿಗಳಿಗೆ 28 ಹಾಗೂ ಇತರ ಹಿಂದುಳಿದ ವರ್ಗಗಳಿಗೆ 108 ಹುದ್ದೆಗಳಿವೆ. ಹೆಚ್ಚಿನ ಮಾಹಿತಿಗಾಗಿ www.sbi.co.in ಗಮನಿಸಬಹುದು ಎಂದು ಹೇಳಲಾಗಿದೆ.