ಕೋವಿಡ್-19 ಸೋಂಕಿಗೆ ನೀಡಲಾಗುವ ಕೋವ್ಯಾಕ್ಸ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಸ್ವಯಂಸೇವಕರ ನೇಮಕಾತಿ ಆರಂಭಿಸಲಾಗಿದೆ.
2-17 ವರ್ಷಗಳ ವಯಸ್ಸಿನ ಮಕ್ಕಳಿಗೆ ನೀಡಲಾಗುವ ಈ ಲಸಿಕೆಯ ಪ್ರಯೋಗ ನಡೆಸಲು ಲಸಿಕೆಯ ಉತ್ಪಾದಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಭಾರತೀಯ ಮದ್ದು ನಿಯಂತ್ರಣ ಪ್ರಾಧಿಕಾರವು ಕಳೆದ ಜುಲೈನಲ್ಲಿ ಅನುಮತಿ ಕೊಟ್ಟಿದೆ.
ಹಮ್ದರ್ದ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ವಿವಿಯಲ್ಲಿ 2ನೇ ಹಂತದ ಈ ವೈದ್ಯಕೀಯ ಪ್ರಯೋಗ ಆರಂಭಗೊಂಡಿದೆ. 10 ಜಾಗಗಳಲ್ಲಿ ಈ ಪ್ರಯೋಗ ಜರುಗಲಿದ್ದು, 920ಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೊರೊನಾ ಲಸಿಕೆಯಲ್ಲಿ ಹೊಸ ದಾಖಲೆ….! ಒಂದೇ ದಿನ 90 ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕಿದ ಭಾರತ
ದೇಶೀಯವಾಗಿ ಜ಼ೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಸೂಜಿ-ರಹಿತ ಕೋವಿಡ್ ಲಸಿಕೆ ಜ಼ೈಕೋವ್-ಡಿಗೆ ಅದಾಗಲೇ ತುರ್ತ ಪರಿಸ್ಥಿತಿಯಲ್ಲಿ ಬಳಸಲು ಅನುಮತಿ ನೀಡಲಾಗಿದೆ. 12-18 ವರ್ಷ ವಯಸ್ಸಿನ ಮಂದಿಯಲ್ಲಿ ನೀಡಲಾದ ದೇಶದ ಮೊದಲ ಲಸಿಕೆ ಇದಾಗಿದೆ.
ಜಗತ್ತಿನಾದ್ಯಂತ 18 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್ ಲಸಿಕೆ ಕೊಟ್ಟು ಮುಗಿಸಿದ ಕೂಡಲೇ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ ಚುರುಕು ನೀಡಲು ಸಿದ್ಧತೆಗಳು ಭರದಿಂದ ಸಾಗಿವೆ.