ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಇದೀಗ ಅರ್ಜಿ ಸಲ್ಲಿಸಿದ ಅಭ್ಯಿರ್ಥಿಗಳಿಗೆ ಆಯೋಗ ಮುಖ್ಯ ಮಾಹಿತಿಯೊಂದನ್ನು ನೀಡಿದೆ.
ಪೂರ್ವಭಾವಿ ಮರುಪರೀಕ್ಷೆಯನ್ನು ದಿನಾಂಕ:29-12-2024ರಂದು ನಡೆಸಲು ನಿಗದಿಪಡಿಸಿರುತ್ತದೆ. ಸದರಿ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಅಭ್ಯರ್ಥಿಗಳು ಆಯೋಗದ ವೆಬ್ ಸೈಟ್ Applicant Login ನಿಂದ ದಿನಾಂಕ:26-11-2024ರಂದು ತಂತ್ರಾಂಶದಲ್ಲಿನ ದೋಷದಿಂದಾಗಿ ಪ್ರವೇಶ ಪತ್ರವನ್ನು Download ಮಾಡಿಕೊಂಡಿರುತ್ತಾರೆಂದು ತಿಳಿದುಬಂದಿರುತ್ತದೆ.
ಆಯೋಗವು ದಿನಾಂಕ:29-12-2024ರ ಪೂರ್ವಭಾವಿ ಮರುಪರೀಕ್ಷೆಯ ಸಂಬಂಧ ಯಾವುದೇ ಪ್ರವೇಶ ಪತ್ರವನ್ನು ಆಯೋಗದ ವೆಬ್ಸೈಟ್ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿರುವುದಿಲ್ಲವಾದ ಕಾರಣ ತಾಂತ್ರಿಕ ದೋಷದಿಂದಾಗಿ ಪ್ರಸ್ತುತ Download ಮಾಡಿಕೊಂಡಿರುವ ಪ್ರವೇಶ ಪತ್ರಗಳನ್ನು ಅಸಿಂಧುಗೊಳಿಸಿದೆ.ಮುಂದುವರೆದು, ಎಲ್ಲಾ ಅಭ್ಯರ್ಥಿಗಳಿಗೆ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶಪತ್ರವನ್ನು Download ಮಾಡಿಕೊಳ್ಳುವ ಕುರಿತು ಸಮುಚಿತ ಮಾರ್ಗದಲ್ಲಿ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.