alex Certify ಶುಭ ಸುದ್ದಿ: ರಾಜ್ಯಾದ್ಯಂತ ಹಾಲು ಒಕ್ಕೂಟದ ಖಾಲಿ ಹುದ್ದೆಗಳಿಗೆ ನೇಮಕಾತಿ: ಸಚಿವ ಸೋಮಶೇಖರ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: ರಾಜ್ಯಾದ್ಯಂತ ಹಾಲು ಒಕ್ಕೂಟದ ಖಾಲಿ ಹುದ್ದೆಗಳಿಗೆ ನೇಮಕಾತಿ: ಸಚಿವ ಸೋಮಶೇಖರ್ ಮಾಹಿತಿ

ಕಲಬುರಗಿ:‌ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರು ಸೋಮವಾರ ಕಲಬುರಗಿ ನಗರದಲ್ಲಿರುವ ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ‌ ಸಂಘಗಳ ಒಕ್ಕೂಟ ನಿಯಮಿತ ಕಚೇರಿಗೆ ದಿಢೀರ ಭೇಟಿ ನೀಡಿ ಪರಿಶೀಲಿಸಿದರು.

ಒಕ್ಕೂಟದ ಆರ್ಥಿಕ ಸ್ಥಿತಿಗತಿ ಮತ್ತು ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ‌ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಾದ್ಯಂತ ಹಾಲು ಒಕ್ಕೂಟ ಕಚೇರಿಗಳಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ ಕುರಿತಂತೆ ಸಂಸ್ಥೆಯ ಲಾಭಾಂಶ ಮತ್ತು ಅವಶ್ಯಕತೆ ಅನುಗುಣವಾಗಿ ಹುದ್ದೆ‌ ನೇಮಕಾತಿಗೆ ಅನುಮತಿ ನೀಡಲಾಗುತ್ತಿದೆ. ಮೈಸೂರಿನಲ್ಲಿ 195, ಬೆಂಗಳೂರಿನಲ್ಲಿ 295, ಮಂಗಳೂರಿನಲ್ಲಿ 61 ಸೇರಿದಂತೆ ವಿಜಯಪುರ, ಧಾರವಾಡದಲ್ಲಿ ನೇಮಕಾತಿ ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ( ವಿಎಸ್ಎಸ್ಎನ್) ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳ ಮೇಲೆ  ನಿಯಂತ್ರಣ ಹೊಂದಲು ಹೊಸ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಫ್ಯಾಕ್ಸ್ ಸಿಬ್ಬಂದಿಗಳ ವರ್ಗಾವಣೆಗೂ ಈ ಕಾಯ್ದೆ ಅನ್ವಯವಾಗಲಿದ್ದು, ಒಟ್ಟಾರೆ ಸಹಕಾರಿ ಕ್ಷೇತ್ರ ಬಲವರ್ದನೆಗೆ 18 ಬದಲಾವಣೆ ಅಂಶಗಳೊಂದಿಗೆ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ನ್ನು ತಿದ್ದುಪಡಿ ಮುಖಾಂತರ ಹೊಸ ಸಹಕಾರಿ ಕಾಯ್ದೆ ಜಾರಿ ತರಲಾಗುತ್ತಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದ್ದು, ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಬಿಲ್ ಮಂಡಿಸಲಾಗುವುದು. ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ ಗಳನ್ನು ಒಂದೇ ತಂತ್ರಾಂಶದಲ್ಲಿ ತರಲು ಸಹ ಚಿಂತನೆ ನಡೆದಿದೆ ಎಂದು‌ ಹೇಳಿದ್ದಾರೆ.

ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ ಬ್ಯಾಂಕಿನಿಂದ ಹಾಲು ಉತ್ಪಾದಕರ‌ ಸಂಘಗಳಿಗೆ ಗರಿಷ್ಟ 5 ಲಕ್ಷ ರೂ. ವರೆಗೆ ಸಾಲ‌ ನೀಡಲಾಗುವುದು ಎಂದರು.

ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ‌ ಸಂಘಗಳ ಒಕ್ಕೂಟ ನಿಯಮಿತದ ಅಧ್ಯಕ್ಷ ರಾಮಚಂದ್ರ ಕೆ. ಪಾಟೀಲ,‌ ವ್ಯವಸ್ಥಾಪಕ‌ ನಿರ್ದೇಶಕ ಪ್ರಕಾಶ‌ ಕುಮಾರ  ಇದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...