
ಬೆಂಗಳೂರು: 2023-24ನೇ ಸಾಲಿಗೆ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ(Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.
ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳ ಭರ್ತಿ ಮಾಡುವ ಬಗ್ಗೆ ಪರೀಕ್ಷೆ ನಡೆಸಲು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಲೋಕಸಭಾ ಚುನಾವಣಾ ಮಾದರಿ ನೀತಿ ಸಹಿತೆ ಇದ್ದ ಪ್ರಯುಕ್ತ ಕೌನ್ಸಿಲಿಂಗ್ ದಿನಾಂಕವನ್ನು ಪ್ರಕಟಿಸಿರಲಿಲ್ಲ. ಆದ್ದರಿಂದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸುವ ಕುರಿತಂತೆ ಪ್ರಸ್ತುತ ವೇಳಾಪಟ್ಟಿಯನ್ನು ಪರಿಷ್ಕರಿಸಿ ಆದೇಶಿಸಿದೆ.
ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಡೆದ ಪರೀಕ್ಷೆಯ ಫಲಿತಾಂಶ ಪಟ್ಟಿ ಪ್ರಕಟಣೆ(ಪರೀಕ್ಷಾ ಅಂಕಗಳ ಜೊತೆಗೆ ಅಭ್ಯರ್ಥಿಗಳ ಸೇವಾ ಅನುಭವ ಹಾಗೂ ಹೆಚ್ಚಿನ ವಿದ್ಯಾರ್ಹತೆಗೆ ನಿಗದಿಪಡಿಸಿರುವ ಅಂಕಗಳ ಕ್ರೋಢೀಕರಣದೊಂದಿಗೆ) ಪ್ರಕಟಿತ ಫಲಿತಾಂಶ ಪಟ್ಟಿಗೆ ಸೇವಾನುಭವ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳ ಸಹಿತ ಆಕ್ಷೇಪಣೆ ಸಲ್ಲಿಕೆ. ಹಾಗೂ ವಿದ್ಯಾರ್ಹತೆ ಸಂಬಂಧ ಅಂಕಗಳ ಬಗ್ಗೆ ಆಕ್ಷೇಪಣೆಗಳನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ಸರಿಪಡಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರ ವೃಂದದ ಅಂತಿಮ ಅರ್ಹತಾ ಪಟ್ಟಿ ಪ್ರಕಟಣೆ, ಹಾಗೂ ಸರ್ಕಾರಿ ಮುಖ್ಯ ಆಕ್ಷೇಪಣೆಗಳನ್ನು ಸರಿಪಡಿಸಿದ ನಂತರ ಪಟ್ಟಿಯನ್ನು ಕ್ರೋಡೀಕರಣಕ್ಕಾಗಿ ಆಯುಕ್ತಾಲಯಗಳಿಗೆ ಕಳುಹಿಸುವುದು.
ಪ್ರಸ್ತುತ ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಗರಿಷ್ಠ 5 ವರ್ಷ ಪೂರೈಸಿದವರುಗಳ ಹುದ್ದೆಯನ್ನು ಖಾಲಿ ಹುದ್ದೆಗಳೆಂದು ಕೌನ್ಸಿಲಿಂಗೆಗೆ ಪರಿಗಣಿಸಲಾಗುವುದು.
ಪ್ರಸ್ತುತ ನಿರ್ದಿಷ್ಟಪಡಿಸಿದ ಹುದ್ದೆಯಿಂದ ಹಿಮ್ಮುಖ ವರ್ಗಾವಣೆಗೊಂಡು ಕರ್ತವ್ಯದಿಂದ ಬಿಡುಗಡೆಯಾದ ನಂತರ ಒಳಬರುವ ಅಭ್ಯರ್ಥಿಗಳಿಗೆ ಚಾಲನಾದೇಶ ಜಾರಿಗೊಳಿಸಲಾಗುವುದು.

