ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿದ್ದ ಶೇಕಡ 23 ರಷ್ಟು ಹುದ್ದೆಗಳ ಭರ್ತಿ ಮಾಡಲು ಯೋಜನೆ ರೂಪಿಸಿದ್ದು ನಿರಂತರ ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ನಿರಂತರವಾಗಿ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಖಾಲಿ ಹುದ್ದೆಗಳ ಪ್ರಮಾಣ ಶೇಕಡ 11 ರಷ್ಟಕ್ಕೆ ಇಳಿಕೆಯಾಗಿದೆ. ಮಾರ್ಚ್ ವೇಳೆಗೆ ಶೇಕಡ 6 ರಷ್ಟು ಇಳಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ. ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ಮೂಲಕ ರಾಜ್ಯದ ಯಾವುದೇ ಮೂಲೆಯಿಂದ 112 ಕ್ಕೆ ಕಾರ್ಯ ಮಾಡಿದರೆ 15 ಸೆಕೆಂಡ್ ಗಳಲ್ಲಿ ಸ್ಪಂದಿಸಿ 15 ನಿಮಿಷದಲ್ಲಿ ನೆರವು ನೀಡಲಾಗುವುದು. ಈ ಸಮಯವನ್ನು 10 ನಿಮಿಷಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.