ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾಂವ್‌ನ ಲಾವೂಲ್ ಗ್ರಾಮದಲ್ಲಿ ನಾಯಿಗಳು ಮತ್ತು ಕೋತಿಗಳ ಗ್ಯಾಂಗ್ ವಾರ್ ಇರುವಂತೆ ಮಾಡಲಾದ ಅನೇಕ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ತಮ್ಮ ಮರಿಗಳನ್ನು ನಾಯಿಗಳು ಸಾಯಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾದ ಕೋತಿಗಳು, ಕೈಗೆ ಸಿಕ್ಕ ನಾಯಿಮರಿಗಳನ್ನೆಲ್ಲಾ ಮರಗಳು ಮತ್ತು ಮನೆಗಳ ಮೇಲಕ್ಕೆ ಕೊಂಡೊಯ್ದು ಕೆಳಗೆ ಬೀಳಿಸಿ ಸಾಯಿಸುತ್ತಿದ್ದವು ಎಂದು ವರದಿಗಳಲ್ಲಿ ತಿಳಿಸಲಾಗಿತ್ತು.
ಆದರೆ ಈ ವರದಿಗಳ ಸತ್ಯಾಸತ್ಯತೆಯನ್ನು ಅರಿಯಲು ಸ್ಥಳಕ್ಕೆ ತೆರಳಿದ ಜ಼ೀ ನ್ಯೂಸ್ ವರದಿಗಾರ ವಿಷ್ಣು ಬುರ್ಗೆ, ವಾಸ್ತವ ಬೇರೆಯದ್ದೇ ಇದೆ ಎಂದು ತೋರಿದ್ದಾರೆ.
BIG NEWS: MES ಪುಂಡಾಟದ ವಿರುದ್ಧ ಮತ್ತೆ ಸಿಡಿದೆದ್ದ ಕರವೇ ಕಾರ್ಯಕರ್ತರು; ಸುವರ್ಣ ಸೌಧಕ್ಕೆ ಮುತ್ತಿಗೆಗೆ ಸಜ್ಜು; ಬೆಳಗಾವಿಯಲ್ಲಿ ರಾರಾಜಿಸಿದ ಕನ್ನಡದ ಬಾವುಟ
ನಾಯಿಗಳು ಕೋತಿ ಮರಿಗಳ ಮೇಲೆ ದಾಳಿ ಮಾಡಿದ್ದಾಗಲೀ ಅಥವಾ ಗ್ಯಾಂಗ್ ವಾರ್ ಬಗ್ಗೆಯಾಗಲಿ ಯಾವುದೇ ರೀತಿಯ ಸ್ಪಷ್ಟವಾದ ಮಾಹಿತಿ ಇಲ್ಲವೆನ್ನುವ ಬುರ್ಗೆ, ಕಳೆದ ಕೆಲ ತಿಂಗಳುಗಳಲ್ಲಿ ಮಂಗಗಳು ನಾಯಿ ಮರಿಗಳನ್ನು ಮನೆಯ ಛಾವಣಿಗಳ ಮೇಲೆ ಕೊಂಡೊಯ್ದಿದ್ದು ನಿಜವೆಂದಿದ್ದಾರೆ.
ನಾಯಿ ಮರಿಗಳನ್ನು ಮನೆಗಳ ಮೇಲೆ ಕೊಂಡೊಯ್ಯುವ ಕೋತಿಗಳು ಅವುಗಳನ್ನು ಕೆಳಗೆ ಎಸೆದಿಲ್ಲ, ಬದಲಾಗಿ ಅವುಗಳನ್ನು ಅಲ್ಲಿಯೇ ಬಿಟ್ಟು ಬರುವ ಕಾರಣ, ನಾಯಿಮರಿಗಳಿಗೆ ಕೆಳಗೆ ಇಳಿದು ಬರಲು ದಾರಿ ಗೊತ್ತಾಗದೇ ಅಲ್ಲೇ ಇದ್ದು ಹಸಿವಿನಿಂದ ಸಾಯುತ್ತಿವೆ ಎಂದು ಬುರ್ಗೆ ತಿಳಿಸುತ್ತಾರೆ.
ಕೋತಿಗಳ ಭಯದಿಂದ ಇಲ್ಲಿನ ನಿವಾಸಿಗಳು ತಮ್ಮ ಮನೆಗಳ ಮೇಲೆ ಹೋಗದೇ ಇರುವ ಕಾರಣದಿಂದಲೂ ನಾಯಿ ಮರಿಗಳು ಅಲ್ಲೇ ಇದ್ದುಬಿಟ್ಟು, ಹಸಿವೆಯಿಂದ ಸಾಯುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.
ಸಾಮಾನ್ಯವಾಗಿ ಹೇನು ಹೆಕ್ಕುವ ಅಭ್ಯಾಸ ಇರುವ ಕೋತಿಗಳು ತಮ್ಮ ಈ ಅಭ್ಯಾಸಬಲದಿಂದಾಗಿ ನಾಯಿಮರಿಗಳ ಮೈಮೇಲೆ ಇರುವ ಕೀಟಗಳನ್ನು ತೆಗೆಯಲು ಹಾಗೆ ಅವುಗಳನ್ನು ಮೇಲೆತ್ತಿಕೊಂಡು ಸಾಗುತ್ತವೆ ಎಂದಿದ್ದಾರೆ.
https://twitter.com/bhin_deshi/status/1472249031631925252?ref_src=twsrc%5Etfw%7Ctwcamp%5Etweetembed%7Ctwterm%5E1472249031631925252%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fmonkeys-dogs-gangwar-maharashtra-beed-majalgaon-puppies-ground-report-twitter-reactions-viral-video-photos-5145204%2F