alex Certify ‘ರಿಯಲ್ ಲೈಫ್’ ಟಾರ್ಜನ್ ಸಾವಿಗೆ ಕಾರಣವಾಯ್ತಾ ನಾಗರೀಕತೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಿಯಲ್ ಲೈಫ್’ ಟಾರ್ಜನ್ ಸಾವಿಗೆ ಕಾರಣವಾಯ್ತಾ ನಾಗರೀಕತೆ…?

ಕಳೆದ 41 ವರ್ಷಗಳಿಂದ ಕಾಡಿನಲ್ಲೇ ವಾಸಿಸುತ್ತಿದ್ದ ‘ರಿಯಲ್ ಲೈಫ್ ಟಾರ್ಜನ್’ ಎಂದೇ ಹೆಸರುವಾಸಿಯಾಗಿದ್ದ ಹೋ ವನ್ ಲ್ಯಾಂಗ್ ಕೊನೆಯುಸಿರೆಳೆದಿದ್ದಾರೆ.

ಪಿತ್ತಜನಕಾಂಗ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹೋ ತನ್ನ 52ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತನ್ನ ತಂದೆ ಹಾಗೂ ಸಹೋದರನೊಂದಿಗೆ 41 ವರ್ಷಗಳಿಂದ ವಿಯೆಟ್ನಾಂನ ಕಾಡಿನಲ್ಲಿ ವಾಸಿಸುತ್ತಿದ್ದರು.

1972ರಲ್ಲಿ ವಿಯೆಟ್ನಾಂ ಯುದ್ಧದ ಕೊನೆಯಲ್ಲಿ ಯುಎಸ್ ನ ಬಾಂಬ್ ದಾಳಿಗೆ ತಾಯಿ ಹಾಗೂ ಇಬ್ಬರು ಒಡಹುಟ್ಟಿದವರನ್ನು ಕಳೆದುಕೊಂಡ ಹೋ, ನಾಗರೀಕತೆಯಿಂದ ಪಲಾಯನ ಮಾಡಿ ಕಾಡಿನಲ್ಲಿ ಜೀವನ ಸಾಗಿಸಲು ನಿರ್ಧರಿಸಿದರು. ಕ್ವಾಂಗ್ ನ್ಗೈ ಪ್ರಾಂತ್ಯದ ಟೇ ಟ್ರಾ ಜಿಲ್ಲೆಯ ಕಾಡಿನಲ್ಲಿ ತಂದೆ ಹಾಗೂ ಸಹೋದರನೊಂದಿಗೆ ನೆಲೆಸಿದರು. ಜೇನುತುಪ್ಪ, ಹಣ್ಣು ಮತ್ತು ಕಾಡು ಪ್ರಾಣಿಗಳನ್ನು ತಿನ್ನುತ್ತಾ ಅರಣ್ಯದಲ್ಲೇ ವಾಸಿಸುತ್ತಿದ್ದರು.

1972 ರಿಂದ ಹೋ ಕೇವಲ ಐವರು ನಾಗರಿಕರನ್ನು ನೋಡಿದ್ದಾರಂತೆ ಹಾಗೂ ಪ್ರತಿ ಬಾರಿ ಅವರನ್ನು ನೋಡಿದಾಗಲೂ ಓಡಿಹೋಗುತ್ತಿದ್ದರೆಂದು ಹೇಳಲಾಗಿದೆ. ಬದುಕಿರುವವರೆಗೂ ಹೋ ನಾಗರೀಕನಾಗಿ ಇರದೆ, ಸಂಪೂರ್ಣ ಅರಣ್ಯವಾಸಿಯಾಗಿಯೇ ಜೀವನ ಕಳೆದಿದ್ದ ಎಂದು ಹೇಳಲಾಗಿದೆ.

ಹೋ ಜೀವನಶೈಲಿಯು ಬಹಳಷ್ಟು ಸಂಸ್ಕರಿಸಿದ ಆಹಾರಗಳು ಮತ್ತು ಸಾಂದರ್ಭಿಕ ಮದ್ಯಸಾರವನ್ನು ಒಳಗೊಂಡಿತ್ತು. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರಿಂದ ಸಾವಿಗೆ ಕಾರಣವಾಯಿತು ಅಂತಾ ಹೋ ಸ್ನೇಹಿತರೊಬ್ಬರು ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...